ಭಾರತ, ಫೆಬ್ರವರಿ 14 -- ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್‌ಶೋಗೆ ಇಂದು (ಫೆ. 14) ತೆರೆ ಬೀಳಲಿದೆ. ಕಳೆದ 4 ದಿನಗಳಿಂದ ಯಲಂಹಂಕಾದ ವಾಯುನೆಲೆಯಲ್ಲಿ ನಡೆಯುತ್ತಿರುವ 15ನೇ ಏರೋ ಇಂಡಿಯಾ, ಫೆ.14ರ ಶುಕ್ರವಾರ ಸಂಜೆ ಮುಕ್ತಾಯಗೊಳ್ಳಲಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ವೀಕ್ಷಿಸಲು ಈ ದಿನ ಕೊನೆಯ ಅವಕಾಶವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಏರ್‌ಶೋನಲ್ಲಿ ಕೊನೆಯ ಎರಡು ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಇಂದು ಕೊನೆಯ ದಿನವಾಗಿರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ.

ಎರಡು ಹಂತಗಳಲ್ಲಿ ವೈಮಾನಿಕ ಪ್ರದರ್ಶನಗಳು ನಡೆಯುತ್ತವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12‌ ಗಂಟೆಯವರೆಗೆ ಮೊದಲ ಹಂತ, ಮಧ್ಯಾಹ್ನ 2.30ರಿಂದ ಸಂಜೆ 4.40ರವರೆಗೆ ಎರಡನೇ ಹಂತದ ವಿಮಾನ ಹಾರಾಟಗಳು ನಡೆಯಲಿವೆ.

ಏರ್‌ಶೋ ವೀಕ್ಷಿಸಬೇಕಾದರೆ ಭದ್ರತಾ ತಪಾಸಣೆಗಳನ್ನು ಕಟ್ಟುನಿಟ್ಟಾಗಿರುತ್ತದೆ. ಹೀಗಾಗಿ ಸಂದರ್ಶಕರು ಮಾನ್ಯವಾಗಿರುವ ಯಾವುದಾದರೂ ಸರ್ಕಾರಿ ಐಡಿಯನ್ನು ಹೊಂದಿರಬೇಕು....