Bengaluru, ಮಾರ್ಚ್ 6 -- Bengaluru Hair Theft: ಬೆಂಗಳೂರು ಉತ್ತರದ ಹೊರವಲಯದಲ್ಲಿ ವಿಚಿತ್ರ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕೂದಲು ಅಂದ್ರೆ ಸುಮ್ನೇನಾ. ಅದು ಕೂಡ ಸಂಪತ್ತು ಎಂಬುದನ್ನು ಅರಿತ ಕೆಲವು ಕಳ್ಳರು ಕೂದಲು ಕಳ್ಳತನಕ್ಕೆ ಇಳಿದಿದ್ದಾರೆ. ಹೌದು, ಉತ್ತರ ಬೆಂಗಳೂರಿನ ಹೊರವಲಯದ ಲಕ್ಷ್ಮೀಪುರ ಕ್ರಾಸ್‌ ಸಮೀಪದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 27 ಮೂಟೆ ಕೂದಲು ಕಳುವಾಗಿದೆ. 800ಕ್ಕೂ ಹೆಚ್ಚು ಕಿಲೋ ತೂಕದ ಕೂದಲು ಕಳ್ಳತನವಾಗಿದ್ದು, ಅದರ ಮೌಲ್ಯ 1 ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಎಸ್‌ಯುವಿ ಕಾರ್‌ನಲ್ಲಿ ಬಂದ ಆರು ಜನರ ತಂಡ ಈ ಕೃತ್ಯವೆಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಬೆಂಗಳೂರು ಉತ್ತರದ ಹೆಬ್ಬಾಳ ಸಮೀಪದ ಲಕ್ಷ್ಮೀಪುರ ಸಮೀಪದ ಕೂದಲು ವ್ಯಾಪಾರಿ ವೆಂಕಟಸ್ವಾಮಿ ಕೆ ಎಂಬುವವರು ಗೋದಾಮಿನಲ್ಲಿ ಕೂದಲು ಸಂಗ್ರಹಿಸಿದ್ದರು. ಮಹೀಂದ್ರಾ ಬೊಲೆರೋದಲ್ಲಿ ಬಂದ ಆರು ಜನರ ತಂಡ ಕಬ್ಬಿಣದ ರಾಡ್ ಬಳಸಿ ರೋಲಿಂಗ್ ಶಟರ್ ಮುರಿದು ಒಳನುಗ್ಗಿ ಕೂದಲು ಮೂಟೆಯನ್ನು ಹೊತ್ತೊಯ್ದಿದ್ದಾರೆ. ಇದು ಸ...