ಭಾರತ, ಮೇ 12 -- ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಮಧ್ಯಸ್ತಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿತ್ತು. ಆ ನಂತರ ಟ್ರಂಪ್‌ ಮಧ್ಯಸ್ತಿಕೆಗೆ ಬೇಡಿಕೆ ಹೆಚ್ಚಿದಂತಿದೆ. ಇದೀಗ ಬೆಂಗಳೂರಿನ ಈಜಿಪುರ ಫ್ಲೈವರ್‌ ಕಾಮಗಾರಿ ವಿಚಾರದಲ್ಲೂ ಟ್ರಂಪ್‌ ಮಧ್ಯಸ್ತಿಕೆ ಬೇಕು ಎಂದು ಸ್ಥಳೀಯರೊಬ್ಬರು ಆಗ್ರಹಿಸಿದ್ದಾರೆ.

ಬೆಂಗಳೂರು ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಡೊನಾಲ್ಡ್ ಟ್ರಂಪ್ ನಗರದಲ್ಲಿ ಬಹಳ ದಿನಗಳಿಂದ ವಿಳಂಬವಾಗುತ್ತಿರುವ ಎರಡು ಮೂಲಸೌಕರ್ಯ ಯೋಜನೆಗಳಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು ಈಜಿಪುರ ಫ್ಲೈಓವರ್ ನಿರ್ಮಾಣ ಮತ್ತು ನಮ್ಮ ಮೆಟ್ರೋದ ಹಳದಿ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು‌ ಮಧ್ಯಸ್ತಿಕೆ ವಹಿಸಿ ಸ್ಥಳೀಯ ಅಧಿಕಾರಗಳ ಜೊತೆ ಮಾತನಾಡಬೇಕು ಎಂದು ಟ್ರಂಪ್‌ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸುದ್ದಿ ಪತ್ರಿಕೆಯಲ್ಲ ಇದು ಆಮಂತ್ರಣ ಪತ್ರಿಕೆ, ಹೇಗಿದೆ ನೋಡಿ ಮದುವೆಯ ಮಮತೆಯ ಕರೆಯೋಲೆ, ವೈರಲ್‌ ಸ್ಟೋರಿ

ʼಬೆಂಗ...