Bangalore, ಏಪ್ರಿಲ್ 23 -- ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.

ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ಬೆಂಗಳೂರಿನ ಇಸ್ಕಾನ್‌ ಘಟಕದ ಶ್ರೀ ಬ್ರಹ್ಮೋತ್ಸವ 2025ದ ನಂತರ ತೆಪ್ಪೋತ್ಸವವೂ ಆಕರ್ಷಕವಾಗಿತ್ತು.

ಶ್ರೀ ಕೃಷ್ಣ ಹಾಗೂ ರಾಧಾ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ತೆಪ್ಪದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಬೆಂಗಳೂರಿನ ಇಸ್ಕಾನ್‌ ಘಟಕದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷವೂ ನಾನಾ ಚಟುವಟಿಕೆಗಳು 12 ದಿನಗಳ ಸಂಭ್ರಮಾಚರಣೆಯೊಂದಿಗೆ ಕೃಷ್ಣ ಭಕ್ತರನ್ನು ಸೆಳೆಯುತ್ತದೆ. ಕೃಷ್ಣ ಬಲರಾಮರ ಅಲಂಕಾರವೂ ವಿಶೇಷ ಎನ್ನಿಸಲಿದೆ.

ವಾರ್ಷಿಕೋತ್ಸವದ...