ಭಾರತ, ಮೇ 3 -- ಬೆಂಗಳೂರು: ರಾಜ್ಯ ಸರಕಾರ ಯಾವುದರ ತೆರಿಗೆ ಏರಿಸಿದೆ ಎಂದು ಹೇಳುವುದರ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಇದೊಂದಕ್ಕೆ ತೆರಿಗೆ ಹಾಕಿಲ್ಲ ಎಂದು ಅಂದುಕೊಳ್ಳುತ್ತಿದ್ದಂತೆ ಅದಕ್ಕೂ ತೆರಿಗೆ ಹಾಕಿರುವ ಆದೇಶ ಕಣ್ಣಿಗೆ ರಾಚುತ್ತದೆ.
ಹಾಲು, ಮೊಸರು, ಇಂಧನ, ಕಸ, ಪಾರ್ಕಿಂಗ್, ಆಸ್ತಿ ತೆರಿಗೆ ಮದ್ಯದ ಬೆಲೆ ಏರಿಕೆ ನಂತರ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ನಾಡಪ್ರಭು ಕೆಂಪೇಗೌಡ ಲೇ ಔಟ್ ನ ಆಸ್ತಿಗಳ ತೆರಿಗೆ ಹೆಚ್ಚಿಸಲಾಗಿದೆ. ಶೇ.9 ರಿಂದ ಶೇ.50ರವೆರೆಗೂ ತೆರಿಗೆ ಹೆಚ್ಚಿಸಲಾಗಿದ್ದು, 2025-26ರ ಸಾಲಿನಿಂದಲೇ ತೆರಿಗೆ ಹೆಚ್ಚಳ ಅನ್ವಯವಾಗಲಿದೆ. ದರ ಏರಿಕೆಯನ್ನೇನೂ ಸರ್ಕಾರ ಬಹಿರಂಗವಾಗಿ ಪ್ರಕಟಿಸಿಲ್ಲ. ನಿವೇಶನದಾರರು ತೆರಿಗೆ ಪಾವತಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವೆಬ್ ಸೈಟ್ ಪ್ರವೇಶಿಸಿದಾಗ ಶಾಕ್ ಉಂಟಾಗಿದೆ.
30x40 ಅಳತೆಯ ನಿವೇಶನಕ್ಕೆ ರೂ.834 ಇದ್ದ ತೆರಿಗೆ ಈ ವರ್ಷದಿಂದ 1,208 ರೂಪಾಯಿಗೆ ಹೆಚ್ಚಳವಾಗಿದೆ. 50x80 ಅಳತೆಯ ನಿವೇಶನಕ್ಕೆ 6,000 ರೂಪಾಯಿ ಇದ್ದ ಆಸ್ತಿ ತೆರಿಗೆ 9,200 ರೂಗಳಿಗೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.