ಭಾರತ, ಫೆಬ್ರವರಿ 27 -- ಬೆಂಗಳೂರು: ಇಡ್ಲಿ ಪ್ರಿಯರ ಮಟ್ಟಿಗೆ ಇದು ಕಳವಳಕಾರಿ ಸುದ್ದಿ, ಕರ್ನಾಟಕದ 52 ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪಾಲಿಥೀನ್ ಕವರ್ (ಪ್ಲಾಸ್ಟಿಕ್ ಶೀಟ್‌) ಬಳಸುತ್ತಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಶೀಟ್‌ಗಳು ವಿಶೇಷವಾಗಿ ತೆಳುವಾದ ಪಾಲಿಥೀನ್‌ ಕವರ್‌ ಬಹಳ ಅಪಾಯಕಾರಿ ಎಂದು ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ಮೂಲಕ ಇಡ್ಲಿ ಸ್ಯಾಂಪಲ್‌ಗಳಲ್ಲಿ ಕಾರ್ಸಿನೋಜೆನ್ ಅಂಶ ಇರುವುದು ಬಹಿರಂಗವಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು.

ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕ 251 ಕಡೆ ಇಡ್ಲಿ ಸ್ಯಾಂಪಲ್ ಸಂಗ್ರಹಿಸಿದ್ದರು. ಈ ಪೈಕಿ 52 ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಸಲು ಪಾಲಿಥೀನ್ ಶೀಟ್ (ಪ್ಲಾಸ್ಟಿಕ್ ಶೀಟ್‌) ಬಳಸುತ್ತಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಶೀಟ್‌ಗಳು ವಿಶೇಷವಾಗಿ ತೆಳುವಾದ ಪಾಲಿಥೀನ್ ಶೀಟ್‌ನಲ್ಲಿ ಕಾರ್ಸಿನೋಜೆನ್ ಅಂಶಗಳಿರುವುದು ಈಗಾಗಲೇ ಬಹಿರಂಗವಾಗಿದೆ. ಆದ್ದರಿಂದ ಹೋಟೆಲ್ ಇಂಡಸ್ಟ್ರಿಯಲ್ಲಿ ಆಹಾರ ತಯಾರಿಕ...