ಭಾರತ, ಫೆಬ್ರವರಿ 17 -- ಬೆಂಗಳೂರು: ಪಾವಗಡ ಸಮೀಪದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ತನ್ನ 5 ವರ್ಷದ ಮಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯ ರಾಮಯ್ಯ ಲೇಔಟ್‌ನ ಮನೆಯೊಂದರಲ್ಲಿ ಭಾನುವಾರ ಈ ಕಳವಳಕಾರಿ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರೋಶಿನಿ (5) ಮತ್ತು ಶೃಗಿ (33) ಎಂದು ಗುರುತಿಸಲಾಗಿದೆ.

ಪಾವಗಡ ಸಮೀಪದ ಗ್ರಾಮದಲ್ಲಿ ಗ್ರಾಪಂನ ಮಾಜಿ ಅಧ್ಯಕ್ಷೆಯಾಗಿದ್ದ ಶೃತಿ ಹಾಗೂ ಅದೇ ಗ್ರಾಪಂ ಕಚೇರಿಯಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಅವರದ್ದು ಪ್ರೇಮ ವಿವಾಹ. 10 ವರ್ಷ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳು. ಭಾನುವಾರ ಸಂಜೆ ಗೋಪಾಲಕೃಷ್ಣ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಶೃತಿ ಈ ಕೃತ್ಯವೆಸಗಿದ್ದರು. ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿದ ವೇಳೆ ದಂಪತಿಯ ಪುತ್ರ ಹೊರಗೆ ಆಟವಾಡಲು ಹೋಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಗಲಗುಂಟೆ ಸಮೀಪದ ಮನೆಯಲ್ಲಿ ಆತ್ಮಹತ್ಯೆ...