ಭಾರತ, ಜೂನ್ 3 -- ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪುದ್ಮ ಪುರಸ್ಕಾರಕ್ಕೆ ನಾಮನಿರ್ದೇಶನ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಆಹ್ವಾನಿಸಿದೆ. ಈ ನಾಮ ನಿರ್ದೇಶನ ಸಲ್ಲಿಸುವುದಕ್ಕೆ ಜುಲೈ 31 ಕೊನೇ ದಿನವಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ತಾನು ಕೂಡ ಪದ್ಮ ಪುರಸ್ಕಾರಕ್ಕೆ ಅರ್ಹರನ್ನು ಶಿಫಾರಸು ಮಾಡುವುದಕ್ಕೆ ನಾಮನಿರ್ದೇಶನವನ್ನು ಜುಲೈ 15ರ ಒಳಗೆ ಶಿಫಾರಸು ಮಾಡುವಂತೆ ಸಾರ್ವಜನಿಕರನ್ನು ಕೋರಿದೆ.

ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ, ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪುದ್ಮ ಪುರಸ್ಕಾರಗಳಾದ 'ಪದ್ಮ ವಿಭೂಷಣ', ಪದ್ಮ ಭೂಷಣ' ಮತ್ತು 'ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವ ದಿನದ ಹಿಂದಿನ ದಿನ ಕೇಂದ್ರ ಸರ್ಕಾರದಿಂದ...