ಭಾರತ, ಫೆಬ್ರವರಿ 3 -- ಬೆಂಗಳೂರಿನ ಟ್ರಾಫಿಕ್‌ ನಿಯಮಗಳು ಆಗಾಗ ಚರ್ಚೆಯ ವಿಷಯವಾಗುತ್ತದೆ. ಟ್ರಾಫಿಕ್‌ ಸಮಸ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳವಾಗುವುದು ಇನ್ನೊಂದೆಡೆ. ಈ ನಡುವೆ, ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಲಕ್ಷಗಟ್ಟಲೆ ದಂಡ ಬಿದ್ದರೂ, ಆ ವ್ಯಕ್ತಿ ಮಾತ್ರ ರಾಜಾರೋಷವಾಗಿ ಮತ್ತೆ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಇದರಿಂದಾಗಿ ದಂಡದ ಮೊತ್ತವೂ ಹಿಗ್ಗುತ್ತಲೇ ಇದೆ. ಆದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಳಕೆದಾರರೊಬ್ಬರು ಆರೋಪಿಸಿದ್ದಾರೆ.

ಸಂಚಾರ ನಿಯಮಗಳ ಉಲ್ಲಂಘನೆಯ ಬಗ್ಗೆ ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ಬೆನ್ನಲ್ಲೇ, ದ್ವಿಚಕ್ರ ವಾಹನವು ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿದೆ.

ಕೆಲವು ಸಮಯದಿಂದ ದ್ವಿಚಕ್ರ ವಾಹನದ ದಂಡವನ್ನು ಟ್ರ್ಯಾಕ್ ಮಾಡುತ್ತಿರುವ ಶಿಬಾಮ್ ಎಂಬ ಬಳಕೆದಾರ, ದಂಡದ ಮೊತ್ತದ ...