Bengaluru, ಏಪ್ರಿಲ್ 9 -- ಬೆಂಗಳೂರಿನಲ್ಲಿ ಬಿಸಿಲು ಹೆಚ್ಚುತ್ತಿದ್ದು, ಇಲ್ಲಿನ ನಿವಾಸಿಗಳು ನೀರಿನ ಅಭಾವ ತಲೆದೋರಬಹುದೇ ಎಂಬ ಆತಂಕದಲ್ಲಿದ್ದಾರೆ. ಏಕಾಏಕಿ ಅಂತರ್ಜಲ ಕುಸಿತವಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ನೀರಿನ ಅಭಾವ ಸೃಷ್ಟಿಯಾಗುವುದೇ? ಖಾಸಗಿ ಟ್ಯಾಂಕರ್ ಗಳ ಮಾಫಿಯಾ ಕೆಲಸ ಮಾಡುವುದೇ? ನೀರಿಗಾಗಿಯೇ ಸಾವಿರಾರು ರೂ.ಗಳನ್ನು ಮೀಸಲಿಡಬೇಕೇ ಎಂದು ಭಯಭೀತರಾಗಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ನಗರದ 200 ವಾರ್ಡ್ ಗಳಲ್ಲಿ 80ರಲ್ಲಿ ಅಂತರ್ಜಲ ಕುಸಿತವಾಗಿರುವುದನ್ನು ಗುರುತಿಸಿದೆ.
ಈಗಾಗಲೇ ನೀರಿನ ಅಭಾವ ತಲೆ ದೋರಿದ್ದು ಕೆಲವು ಪ್ರದೇಶಗಳಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರಿಗೂ ಬೇಡಿಕೆ ಹೆಚ್ಚುತ್ತಿದ್ದು, ಅವರೂ ಕೂಡಲೇ ಸರಬರಾಜು ಮಾಡುತ್ತಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ನೀರಿನ ಬಿಕ್ಕಟ್ಟು ಎದುರಾಗುವ ಲಕ್ಷಣಗಳಿವೆ ಎಂದು ವೈಟ್ ಫೀಲ್ಡ್ ನಿವಾಸಿಯೊಬ್ಬರು ಹೇಳುತ್ತಾರೆ.
ಬೆಂಗಳೂರಿನ ಹೊರವಲಯದ ಅನೇಕ ಭಾಗಗಳಲ್ಲಿ ಕಾವೇರಿ ನೀರಿನ ಸಂಪರ್ಕ ಇಲ್ಲದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.