ಭಾರತ, ಮೇ 22 -- ಬೆಂಗಳೂರು: ಕನ್ನಡ ಮಾತನಾಡುವುದೇ ಇಲ್ಲ, ಯಾಕೆ ಮಾತನಾಡಬೇಕು, ಬೇಕಾದ್ರೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯ ಸಿಟಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್‌ ಅವರನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ವರ್ಗಾವಣೆ ಮಾಡಿದೆ. ನೇರ ಹಾಗೂ ಸೋಷಿಯಲ್ ಮೀಡಿಯಾ ಪ್ರತಿಭಟನೆ, ದೂರುಗಳ ಬೆನ್ನಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಆಕ್ರೋಶವೂ ವ್ಯಕವಾದ ಬಳಿಕ ಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ. ಇದೇ ವೇಳೆ, ಸೂರ್ಯ ಸಿಟಿ ಶಾಖೆಯ ಹೊಣೆಗಾರಿಕೆಯನ್ನು ಕನ್ನಡಿಗ ಗಿರೀಶ್ ಅವರಿಗೆ ವಹಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಮಂಗಳವಾರ (ಮೇ 20) ಮ್ಯಾನೇಜರ್‌ ಪ್ರಿಯಾಂಕ ಸಿಂಗ್‌ ಅವರು ಗ್ರಾಹಕರ ಜತೆಗೆ ಮಾತಿನ ಚಕಮಕಿ ನಡೆಸಿದ್ದು, ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡದಲ್ಲಿ ಮಾತನಾಡಬೇಕು ಎಂಬ ರೂಲ್ಸ್ ಇದೆಯಾ, ನೀವು ಬೇಕಿದ್ದರೆ ಹಿಂದಿಯಲ್ಲಿ ಮಾತನಾಡಿ, ಇದು ಇಂಡಿಯಾ...