Bengaluru, ಮಾರ್ಚ್ 29 -- Holiday Rush: ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದ ಕಾರಣ ಬೆಂಗಳೂರಿಗರಿಗೆ ಸಾಲು ಸಾಲು ರಜೆ ಸಿಕ್ಕಂತಾಗಿದೆ. ಇದಲ್ಲದೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿದೆ. ಹೀಗಾಗಿ ಈ ಬಾರಿ ವಾರಾಂತ್ಯದಲ್ಲಿ ಊರುಗಳಿಗೆ, ಪುಣ್ಯಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೆ ತೆರಳಲು ಬೆಂಗಳೂರಿಗರು ಮುಂದಾಗಿದ್ದಾರೆ. ಶುಕ್ರವಾರ ಸಂಜೆಯೇ ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕ ದಟ್ಟಣೆ ಕಂಡುಬಂತು. ಅನೇಕರು ಮುಂಚಿತವಾಗಿಯೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಇನ್ನು ಕೆಲವರು ಬಸ್ ನಿಲ್ದಾಣಕ್ಕೆ ಬಂದು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಟಿಕೆಟ್ ದರ ದುಬಾರಿಯಾಗಿರುವುದು ಗಮನಕ್ಕೆ ಬಂದು ಹತಾಶರಾದ ಘಟನೆಯೂ ಕಂಡುಬಂತು.
ಸಾಲು ಸಾಲು ರಜೆ ಲಾಭಪಡೆಯಲು ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಶೇ.50ರವರೆಗೂ ಏರಿಕೆ ಮಾಡಿದ್ದರು. ಹಬ್ಬ ಅಥವಾ ಬೇಡಿಕೆಯ ಸಂದರ್ಭಗಳಲ್ಲಿ ಟಿಕೆಟ್ ನೆಪದಲ್ಲಿ ಖಾಸಗಿ ಬಸ್ ಮಾಲೀಕರು ಸುಲಿಗೆ ಮಾಡುತ್ತಿದ್ದಾರೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲಪ್ರಯಾಣಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.