ಭಾರತ, ಏಪ್ರಿಲ್ 5 -- ಬೆಂಗಳೂರು: ನಗರದಲ್ಲಿ ಸುಮಾರು 859.90 ಕಿ.ಮೀ. ಉದ್ದದ ರಾಜಕಾಲುವೆ ಜಾಲವಿದೆಯಾದರೂ ಮಳೆ ನೀರು ಸರಾಗವಾಗಿ ಹರಿದು ಕೆರೆ ಕಟ್ಟೆಗಳನ್ನು ಸೇರಲು ಸಾಧ್ಯವಾಗುತ್ತಿಲ್ಲ. ಈ ರಾಜಕಾಲುವೆಗಳು ಅಷ್ಟ ದಿಕ್ಕುಗಳಲ್ಲೂ ಒತ್ತುವರಿಯಾಗಿದ್ದು ಚರಂಡಿ ರೂಪ ತಾಳಿವೆ. ಇನ್ನೂ ಕೆಲವು ಕಡೆ ಭೂಗಳ್ಳರು ಕಾಲುವೆಗಳ ಮೂಲ ಪಥದ ದಿಕ್ಕನ್ನೇ ತಪ್ಪಿಸಿದ್ದಾರೆ. ಹೀಗಾಗಿ ಭಾರಿ ಮಳೆಯಾದರೆ ನೀರು ಎಲ್ಲೆಂದರಲ್ಲಿ ಹರಿದು ಅನಾಹುತ ಸೃಷ್ಟಿಯಾಗುತ್ತಿದೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಾಗಿರುವುದು ಬಿಬಿಎಂಪಿಯ ಜವಾಬ್ದಾರಿ. ಆದರೆ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ರಾಜಕಾರಣಿಗಳು ಹಾಗೂ ಬಲಾಢ್ಯರ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆಯನ್ನು ಕೈ ಬಿಟ್ಟಿದ್ದಾರೆ. ಭಾರಿ ಮಳೆಯಿಂದ ಪ್ರವಾಹ ಉಂಟಾದಾಗ ಒತ್ತುವರಿ ತೆರವುಗೊಳಿಸುವ ನಾಟಕ ಆರಂಭಿಸಿ ತಡೆಯಾಜ್ಞೆ, ದಾಖಲೆ ಇತ್ಯಾದಿ ಹೆಸರಿನಲ್ಲಿ ಕೈ ಬಿಡುತ್ತಾರೆ. ಅಲ್ಲಿಗೆ ಮಳೆಗಾಲವೂ ಮುಗಿಯುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅ...