ಭಾರತ, ಫೆಬ್ರವರಿ 7 -- BMTC Fare Hike Impact: ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಿಎಂಟಿಸಿ ಡಿಜಿಟಲ್ ಮೈಲಿಗಲ್ಲು ಸಾಧಿಸಿದ್ದು, ಫೆ.3 ರಂದು ಒಂದೇ ದಿನ ಯುಪಿಐ ಮೂಲಕವೆ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಹಾಗೆ ಬಿಎಂಟಿಸಿಯ ದೈನಂದಿನ ಆದಾಯ ಯುಪಿಐ ಮೂಲಕ 1 ಕೋಟಿ ರೂಪಾಯಿ ಗಡಿ ದಾಟಿದ ದಾಖಲೆ ಸೃಷ್ಟಿಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್‌ ಮೂಲಕ ಟಿಕೆಟ್‌ ಖರೀದಿಸುವ ಸೌಲಭ್ಯ ಕಲ್ಪಿಸಲಾಗಿದೆ. ವಿವಿಧ ಕಡೆ ಸಂಚರಿಸುವ ನಗದು ಹಣದ ಬದಲಾಗಿ ಬಹುತೇಕರು ಯುಪಿಐ ಮೂಲಕ ಟಿಕೆಟ್‌ ಪಡೆಯುತ್ತಿದ್ದಾರೆ.

ಬಿಎಂಟಿಸಿ ದಾಖಲೆಗಳ ಪ್ರಕಾರ, ದೈನಂದಿನ ಯುಪಿಐ ವಹಿವಾಟಿನ ಮೊತ್ತವು ಜನವರಿ 9 ರಂದು 56.6 ಲಕ್ಷ ರೂಪಾಯಿ ಇತ್ತು. ಜನವರಿ 13 ರಂದು 60.05 ಲಕ್ಷ ರೂಪಾಯಿ, ಜನವರಿ 20 ರಂದು 80.1 ಲಕ್ಷ ರೂಪಾಯಿ, ಜನವರಿ 27 ರಂದು 90.9 ಲಕ್ಷ ರೂಪಾಯಿ ತಲುಪಿತ್ತು. ಈಗ ಫೆಬ್ರವರಿ 3 ರಂದು 1.03 ಕೋಟಿ ರೂಪಾಯಿ ದಾಟಿದೆ. ದಿನೇದಿನೆ ಹೆಚ್ಚು ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುತ್ತಿರು...