ಭಾರತ, ಮಾರ್ಚ್ 13 -- ಬೆಂಗಳೂರು: ಪ್ರೀತಿಸುವಂತೆ ಮಗಳನ್ನು ಬಲವಂತ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಬುದ್ಧಿಮಾತು ಹೇಳಿದ್ದಕ್ಕಾಗಿ ಆಕೆಯ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಸುನಿಲ್ ಕುಮಾರ್ (27), ಕೋಲಾರದ ವಿನೋಭನಗರದ ಯಶ್ವಂತ್ ಯಾದವ್ (26) ಹಾಗೂ ತಾಲ್ಲೂಕಿನ ಉರಿಗಿಲಿ ಗ್ರಾಮದ ನಿವಾಸಿ ಮನೋಜ್ ಕುಮಾರ್ (26) ಬಂಧಿತ ಆರೋಪಿಗಳು.

ಹೊನ್ನೇನಹಳ್ಳಿ ಗ್ರಾಮದ ರಾಮಸ್ವಾಮಯ್ಯ ಎಂಬುವರ ಪುತ್ರಿಯನ್ನು ಅದೇ ಗ್ರಾಮದ ಸುನಿಲ್ ಕುಮಾರ್ ಎಂಬಾತ ಪ್ರೀತಿಸುವಂತೆ ಬಲವಂತ ಮಾಡಿ ಪೀಡಿಸಿ ಬೆದರಿಕೆ ಹಾಕುತ್ತಿದ್ದ. ಈ ವಿಷಯ ತಿಳಿದ ಆಕೆಯ ತಂದೆ ರಾಮಸ್ವಾಮಯ್ಯ ಆತನನ್ನು ಕರೆದು ಬುದ್ದಿ ಹೇಳಿದ್ದರು.

ತನಗೆ ಬುದ್ದಿ ಹೇಳಿದರು ಎಂಬ ಕಾರಣಕ್ಕೆ ರಾಮಸ್ವಾಮಯ್ಯ ಅವರಿಗೆ ಕಾರು ಗುದ್ದಿಸಿ ಕೊಲ್ಲಲು ಸುನಿಲ್ ಕುಮಾರ್ ಪ್ರಯತ್ನ ಪಟ್ಟಿದ್ದ. ಆದರೆ ಯಶಸ್ವಿಯಾಗಿರಲಿಲ್ಲ. ಮತ್ತೆ ಮಾರ್ಚ್ 8ರಂದು...