ಭಾರತ, ಮಾರ್ಚ್ 12 -- ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ 'ಇರಾನಿ ಗ್ಯಾಂಗ್‌'ನ ಇಬ್ಬರು ಕಳ್ಳರನ್ನು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಹುಸೈನ್‌ ಫಯಾಜ್‌ ಸೈಯದ್ (45) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ರಾಮಸ್ವಾಮಿ ಪಲ್ಲಿ ಗ್ರಾಮದ ತಬ್ರೇಜ್‌ ಅಹಮದ್‌ (32) ಬಂಧಿತ ಆರೋಪಿಗಳು. ಇವರಿಂದ ರೂ. 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣಾ ವ್ಯಾಪ್ತಿಯ ಸದಾನಂದನಗರದ ಐದನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯಿಂದ ಚಿನ್ನದ ಸರ ಕಸಿಯಲು ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಪ್ರಯತ್ನಿಸಿದ್ದರು. ಆದರೆ ಸರ ತುಂಡಾಗಿದ್ದು, ಒಂದು ಭಾಗವನ್ನು ಆರೋಪಿಗಳೇ ಕದ್ದೊಯ್ದಿದ್ದರು. ನಂತರ ಸರ ಕಳೆದುಕೊಂಡ ಮಹಿಳೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲ...