ಭಾರತ, ಫೆಬ್ರವರಿ 12 -- ಬೆಂಗಳೂರು: ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಕಂಪನಿ ಮಾಲೀಕರೊಬ್ಬರಿಗೆ ಕಮಿಷನ್‌ ರೂಪದಲ್ಲಿ ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿ 37.50 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಉಮೇಶ್‌ (31), ಸುಕೀರ್ತಿ (41) ನಾಯತ್‌ ಉಲ್ಲಾ (50), ಜಾಕೀರ್‌ (36) ಹಾಗೂ ಪ್ರತೀಕ್‌ (35), ಬಂಧಿತ ಆರೋಪಿಗಳು. ಇವರಿಂದ ಎರಡು ಕಾರು, ಐದು ಮೊಬೈಲ್‌, ಆರ್‌ಬಿಐ ಹೆಸರಿನಲ್ಲಿದ್ದ ಎರಡು ನಕಲಿ ಕಡತಗಳು, 1 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇಷಾದ್ರಿಪುರದ ಕಂಪನಿಯೊಂದರ ಮಾಲೀಕರು ನೀಡಿದ ದೂರು ಆಧರಿಸಿ ಬಸವೇಶ್ವರ ನಗರ ಹಾಗೂ ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ನಡೆಸುತ್ತಿದ್ದ ಕಂಪನಿ ನಷ್ಟ ಅನೂಭವಿಸುತ್ತಿತ್ತು. ಹಣಕಾಸಿನ ಅವಶ್ಯಕತೆಯಿದ್ದ ಕಾರಣಕ್ಕೆ ಅವರು ಸಹಾಯ ಮಾಡುವಂತೆ ಇಬ್ಬರು ಸ್ನೇಹಿತರನ್ನು ಭೇಟಿ ಮಾಡಿದ್ದರು. ಆ ಸ್ನೇಹಿತರು ಆರೋಪಿಗಳನ್ನು ಪರಿಚಯ ಮಾ...