ಭಾರತ, ಫೆಬ್ರವರಿ 15 -- ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವರ್ಷ ಜನರಿಗೆ ದುಬಾರಿಯಾಗಿದ್ದ ಈರುಳ್ಳಿ, ಬೆಳ್ಳುಳ್ಳಿ ಈಗ ಕೈಗೆಟಕುವ ಸ್ಥಿತಿಗೆ ತಲುಪಿದೆ. ನಿತ್ಯ ಬಳಕೆಯ ಈರುಳ್ಳಿ- ಬೆಳ್ಳುಳ್ಳಿ ದರ ಇಳಿಕೆಯಾಗಿದ್ದು, ಗ್ರಾಹಕರ ಜೇಬಿನ ಹೊರೆಯನ್ನು ಕೊಂಚ ಕಡಿಮೆ ಮಾಡಿದೆ. ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕಿಲೋಗೆ 120 ರೂಪಾಯಿಯಿಂದ 150 ರೂಪಾಯಿ ಇದೆ. ಇದೇ ರೀತಿ ಈರುಳ್ಳಿ ದರ ಕಿಲೋಗೆ 15 ರೂಪಾಯಿಯಿಂದ 30 ರೂಪಾಯಿ ಇದೆ.

ಕರ್ನಾಟಕದಲ್ಲಿ ಈ ಬಾರಿ ಈರುಳ್ಳಿ, ಬೆಳ್ಳುಳ್ಳಿ ಪೂರೈಕೆ ಚೆನ್ನಾಗಿದ್ದು, ದರ ಇಳಿಕೆಯಾಗಿರುವ ಕಾರಣ ಗ್ರಾಹಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಕಳೆದ ವರ್ಷ ಬೆಳ್ಳುಳ್ಳಿ ದರ ಕಿಲೋಗೆ 500 ರೂಪಾಯಿಯಿಂದ 600 ರೂಪಾಯಿ ತನಕ ಏರಿಕೆಯಾಗಿತ್ತು. ಕಳೆದ ವರ್ಷ ಹವಾಮಾನ ವೈಪರೀತ್ಯಗಳ ಕಾರಣ ವಿಶೇಷವಾಗಿ ಅತಿವೃಷ್ಟಿ ಕಾರಣ ಬೆಳೆ ನಾಶವಾಗಿತ್ತು. ಇದೂ ಅಲ್ಲದೆ, ಅಕಾಲದ ಮಳೆಯೂ ಬೆಳೆ ನಾಶಕ್ಕೆ ಕಾರಣವಾಯಿತು. ಈ ರೀತಿ ಬೆಳೆ ಆವೃತ್ತಿ ವ್ಯತ್ಯಾಸವಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ, ಬೆಲೆ ಏರಿಕೆಯಾಗಿತ್...