ಭಾರತ, ಮೇ 13 -- ಬೆಂಗಳೂರು: ಆಗಂತುಕನೊಬ್ಬ ಪಬ್‌ವೊಂದಕ್ಕೆ ನುಗ್ಗಿ ಗನ್ ತೋರಿಸಿ ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಪಬ್‌ನ ಬಾಗಿಲು ಮುರಿದು ಒಳನುಗ್ಗಿದ್ದ ಆಗಂತುಕ, ಪಿಸ್ತೂಲ್ ತೋರಿಸಿ ಆತಂಕ ಸೃಷ್ಟಿಸಿದ್ದು, ಅಲ್ಲಿಂದ 50,000 ರೂಪಾಯಿಂದ 60,000 ರೂಪಾಯಿ ಹಣ ದೋಚಿಕೊಂಡು ಹೋಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಮಿಟ್ರಿ ಬ್ರ್ಯೂವರಿ ಅಂಡ್ ಕಿಚನ್‌ಗೆ ಸೋಮವಾರ ಮುಂಜಾನೆ 3.30ರಿಂದ 4 ಗಂಟೆ ನಡುವೆ ನುಗ್ಗಿದ ಆಗುಂತಕ ಈ ಕೃತ್ಯ ನಡೆಸಿದ್ದಾಗಿ ಮೂಲಗಳು ತಿಳಿಸಿವೆ. ಪಬ್‌ನ ಭದ್ರತಾ ಸಿಬ್ಬಂದಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಬರುತ್ತಿದ್ದಂತೆ ಆಗತುಂಕ ಅಲ್ಲಿಂದ ಹಣ ದೋಚಿಕೊಂಡು ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ನೆಲ ಮಹಡಿಯ ಹಿಂಬಾಗಿಲನ್ನು ಮುರಿದು 3 ನೇ ಮಹಡಿಗೆ ತೆರಳಿ ಅಲ್ಲಿನ ಕ್ಯಾಷ್ ಕೌಂಟರ್ ನಲ್ಲಿದ್ದ ಸುಮಾರು 50,000...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.