ಭಾರತ, ಮಾರ್ಚ್ 12 -- ಬೆಂಗಳೂರು: ಗ್ರಾಹಕಿ ಎಂಬ ನೆಪದಲ್ಲಿ ಚಿನ್ನಾಭರಣ ಪ್ರದರ್ಶನ ಮೇಳದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ನಿವೃತ್ತ ಶಿಕ್ಷಕಿಯನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಈ ಕಳವು ಮಾಡುತ್ತಿದ್ದುದಾಗಿ ಶಿಕ್ಷಕಿ ಹೇಳಿಕೊಂಡಿದ್ದಾರೆ. ಮೈಸೂರಿನ ಉದಯಗಿರಿ ನಿವಾಸಿ ಜಹೀರಾ ಫಾತೀಮಾ (64) ಬಂಧಿತ ಆರೋಪಿ. ಆಕೆಯಿಂದ 8 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂ ವಜ್ರದ ಬ್ರೇಸ್‌ ಲೆಟ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಾಜಿನಗರದ ರಾಜ್‌ಕುಮಾ‌ರ್ ರಸ್ತೆಯಲ್ಲಿರುವ ಹೋಟೆಲ್‌ ಒಂದರಲ್ಲಿ ಜನವರಿ 17 ರಂದು ನಡೆದಿದ್ದ ಆಭರಣ ಪ್ರದರ್ಶನದಲ್ಲಿ ರೂ. 4.75 ಲಕ್ಷ ಮೌಲ್ಯದ ವಜ್ರದ ಬ್ರೇಸ್‌ ಲೆಟ್ ಮತ್ತು 59 ಗ್ರಾಂ ತೂಕದ ಚಿನ್ನದ ಬಳೆಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನಾತಕೋತ್ತರ ಪದವೀಧರೆಯಾಗದ ಜಹೀರಾ ಮದುವೆಯಾದ ಎರಡನೇ ವರ್ಷಕ್ಕೆ ಪತಿ ಮೃತ ಪಟ್ಟಿದ್ದರು. ಹಾಗಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು....