ಭಾರತ, ಮಾರ್ಚ್ 28 -- ಬೆಂಗಳೂರು: ಚಾಮರಾಜಪೇಟೆಯ ಕೋಟೆ ಪ್ರೌಢಶಾಲೆ ಆವರಣದಲ್ಲಿ ಈ ವರ್ಷ 87ನೇ ಶ್ರೀ ರಾಮನವಮಿ ಸಂಗೀತೋತ್ಸವ ಏಪ್ರಿಲ್ 6 ರಿಂದ ಮೇ 2 ರ ತನಕ ನಡೆಯಲಿದೆ. ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌ ಇದನ್ನು ಆಯೋಜಿಸುತ್ತಿದ್ದು, ತಿಂಗಳು ಪೂರ್ತಿ ನಡೆಯುವ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು, ವೀಣೆ, ಪಿಟೀಲು, ಕೊಳಲು ಸೇರಿ ವಿವಿಧ ಕಲಾವಿದರು ಕಛೇರಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ವಿವರವನ್ನೂ ಟ್ರಸ್ಟ್ ಬಹಿರಂಗಪಡಿಸಿದೆ.

ಏಪ್ರಿಲ್‌ 6ರ ಬೆಳಿಗ್ಗೆ 8.30ರಿಂದ ರಾಮನವಮಿ ಮಹಾ ಅಭಿಷೇಕ ನಡೆಯಲಿದೆ. ಮಲ್ಲಾಡಿ ಸಹೋದರರು ವಿಶೇಷ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಸಂಜೆ 4 ರಿಂದ ಮೈಸೂರು ವಿಜಯ ಸೂರ್ಯ ರವರಿಂದ ನಾಧಸ್ವರ ಕಛೇರಿ ನಡೆಯಲಿದೆ. ಸಂಜೆ 5.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಸಕ್ತ ವರ್ಷದಿಂದ ಆರಂಭಿಸಿರುವ 'ಎಸ್‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ'ಯನ್ನೂ ಇದೇ ಸಮಾರಂಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಸಂದೀಪ್ ನಾರಾ...