ಭಾರತ, ಫೆಬ್ರವರಿ 22 -- ಬೆಂಗಳೂರು: ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸ್ನೇಹಿತರ ಭೇಟಿಗೆ ಬಂದಿದ್ದ ದೆಹಲಿ ಮೂಲದ 35 ವರ್ಷದ ಮಹಿಳೆಯನ್ನು ಕರೆದೊಯ್ದು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ನಡೆದಿದೆ. ಕೋರಮಂಗಲದ ಹೋಟೆಲ್‌ ಒಂದರ ಮಹಡಿಯಲ್ಲಿ ಶುಕ್ರವಾರ (ಫೆ 21) ಮುಂಜಾನೆ ಈ ಘಟನೆ ನಡೆದಿದ್ದು, ಆಕೆ ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ ಮೂಲದವರು. ಬಂಧಿತರನ್ನು ಅಜಿತ್, ವಿಶ್ವಾಸ್‌, ಶಿಭುಲ್, ಶೋಭನ್ ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ದೆಹಲಿ ಮೂಲದವರಾಗಿದ್ದು, ಬೆಂಗಳೂರು ನಗರದ ವ್ಯಕ್ತಿಯನ್ನು ವಿವಾಹವಾಗಿ ಇಲ್ಲೇ ನೆಲೆಸಿದ್ದಾರೆ. ಇವರು ಮದುವೆ ಸೇರಿ ಶುಭ ಸಮಾರಂಭಗಳಿಗೆ ಕೇಟರಿಂಗ್‌ನಲ್ಲಿ ಊಟ ಬಡಿಸುವ ಕೆಲಸ ಮಾಡುತ್ತಿದ್ದರು. ಗುರುವಾರ ತಡರಾತ್ರಿ ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಜಂಕ್ಷನ್‌ಗೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು...