ಭಾರತ, ಫೆಬ್ರವರಿ 28 -- Kannada in the Age of AI: "ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ನಮ್ಮ ಭಾಷೆಯನ್ನೂ ಪ್ರಭಾವಿಸುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳಿಂದಾಗಿ ನಮ್ಮ ಭಾಷೆಗೆ ಹೊಸ ಅವಕಾಶಗಳು ದೊರಕುತ್ತಿವೆ. ಹಾಗೆಯೇ ಹೊಸ ಸವಾಲುಗಳೂ ಎದುರಾಗುತ್ತಿವೆ. ಆತಂಕಗಳು ಇರುವಂತೆಯೇ ಹೊಸ ಸಾಧ್ಯತೆಗಳೂ ಸೃಷ್ಟಿಯಾಗಿವೆ. ಈ ಸವಾಲುಗಳನ್ನು ಎದುರಿಸಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕನ್ನಡಿಗರು ಸಜ್ಜಾಗಬೇಕಿದೆ," ಎಂದು ವಿಜ್ಞಾನ ಲೇಖಕ ಟಿ. ಜಿ. ಶ್ರೀನಿಧಿ ಹೇಳಿದರು. ಸುರಾನಾ ಕಾಲೇಜಿನಲ್ಲಿ ನಡೆದ 'ಎಐ ಕಾಲದಲ್ಲಿ ಕನ್ನಡ' ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಎಐ ತಂತ್ರಜ್ಞಾನದ ಪರಿಚಯ, ನಮ್ಮ ಬದುಕಿನ ಮೇಲೆ ಅದರ ಪ್ರಭಾವ, ಸಂವಹನದಲ್ಲಿ ಎಐ ಬಳಕೆಯ ಸಾಧ್ಯತೆಗಳು ಹಾಗೂ ನಾವು ಬಳಸಬಹುದಾದ ಎಐ ಸಾಧನಗಳ ಕ...