ಭಾರತ, ಫೆಬ್ರವರಿ 27 -- ಬೆಂಗಳೂರು: ನೀವು ಇಡ್ಲಿ ಪ್ರಿಯರಾ, ಹಾಗಾದರೆ ಇಡ್ಲಿ ತಿನ್ನುವ ಮೊದಲು ಇಡ್ಲಿಯನ್ನು ತಯಾರಿಸಲು ಅವರು ಪ್ಲಾಸ್ಟಿಕ್ ಬಳಸಿದ್ದಾರಾ ಅಂತ ಚೆಕ್ ಮಾಡಿಕೊಳ್ಳಿ. ಆಹಾರ ಇಲಾಖೆ ಅಧಿಕಾರಿಗಳು 500ಕ್ಕೂ ಹೆಚ್ಚು ಸ್ಯಾಂಪಲ್ಸ್‌ ಅನ್ನು ಬೆಂಗಳೂರಿನಲ್ಲಿ ಸಂಗ್ರಹಿಸಿದೆ. ಅವುಗಳಲ್ಲಿ ಬಹುತೇಕ ಸ್ಯಾಂಪಲ್‌ಗಳಲ್ಲಿ ಕಾರ್ಸಿನೋಜೆನ್‌​​ ಅಂಶ ಪತ್ತೆಯಾಗಿದೆ ಎಂದು ಅಹಾರ ಇಲಾಖೆ ಮೂಲಗಳು ತಿಳಿಸಿವೆ.

ಆಹಾರ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ವಿವಿಧ ಹೋಟೆಲ್, ರೆಸ್ಟೋರೆಂಟ್‌ಗಳಿಂದ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪ್ರಯೋಗಾಲಯದ ವರದಿ ಈಗ ಅಧಿಕಾರಿಗಳ ಕೈ ಸೇರಿದೆ. 50ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್‌ಗಳು ಅಸುರಕ್ಷಿತ ಎಂಬ ವಿವರ ವರದಿಯಲ್ಲಿದೆ ಎಂದು ಆಹಾರ ಇಲಾಖೆ ಮೂಲಗಳು ವಿವರಿಸಿದೆ.

ಸಾಮಾನ್ಯವಾಗಿ ಇಡ್ಲಿ ತಯಾರಿಸುವಾಗ ಟ್ರೇಯಿಂದ ಇಡ್ಲಿ ಸುಲಭವಾಗಿ ಎದ್ದು ಬರಲಿ ಎಂಬ ಕಾರಣಕ್ಕೆ ಹಿಂದೆಲ್ಲ ತೆಂಗಿನ ಎಣ್ಣೆ, ಶೇಂಗಾ ಎಣ್ಣೆ ಸವರುತ್ತಿದ್ದರು. ಕಾಲಾನುಕ್ರಮದಲ್ಲಿ ಎಣ್ಣೆ ಸವರುತ್ತ ಕೂತರ...