ಭಾರತ, ಫೆಬ್ರವರಿ 27 -- ಬೆಂಗಳೂರು: ಉದ್ಯಾನ ನಗರಿ ಎಂದೇ ಹೆಸರಾಗಿದ್ದ ಬೆಂಗಳೂರಿನಲ್ಲಿ ಅಂತರ್ಜಲ ಬೀತಿ ಎದುರಾಗಿದೆ. ಸತತ ಮೂರನೇ ವರ್ಷ ಅಂತರ್ಜಲದ ಕೊರತೆ ಎದುರಾಗಿರುವ ಹಿನ್ನಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ನಿಷೇಧಿಸಿದೆ. ಬೆಂಗಳೂರಿನಲ್ಲಿ ಸತತ ಮೂರನೇ ವರ್ಷವೂ ಅಂತರ್ಜಲ ಕುಸಿದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಈ ಬೇಸಿಗೆಯಲ್ಲಿ ಬಿರು ಬಿಸಿಲು ಹೆಚ್ಚಳವಾಗಿದ್ದು, ಅಂತರ್ಜಲ ಕುಸಿತಕ್ಕೆ ಇದೂ ಕಾರಣವಾಗಿದೆ. ಹಾಗಾಗಿ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲದೆ ಇಡೀ ವರ್ಷವೂ ಬೋರ್‌ವೆಲ್‌ಗಳನ್ನು ಕೊರೆಯುವುದನ್ನುಬೆಂಗಳೂರು ಜಲಮಂಡಳಿ ವರ್ಷವಿಡೀ ನಿಯಂತ್ರಿಸಲು ನಿರ್ಧರಿಸಿದೆ. ಒಂದು ವೇಳೆ ನಿಯಮ ಮೀರಿ ಬೋರ್‌ವೆಲ್‌ ಕೊರೆಯುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಜಲ ಮಂಡಲಿ ಎಚ್ಚರಿಕೆ ನೀಡಿದೆ.

ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿ ಕೋರಿ ಎನ್‌ ಓ ಸಿ ನೀಡುವಂತೆ ವರ್ಷ...