Bangalore, ಮೇ 7 -- ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಹಮ್ಮಿಕೊಂಡಿದ್ದ ಅಣಕು ಕಾರ್ಯಾಚರಣೆ ಹಾಗೂ ನಾಗರಿಕರಿಗೆ ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕವಾಯತು 'ಆಪರೇಷನ್ ಅಭ್ಯಾಸ್' ಬೆಂಗಳೂರಿನ ಹಲಸೂರಿನಲ್ಲಿ ನಡೆಯಿತು.

ಕಾಲ್ಪನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿ ನಾಗರಿಕರ ರಕ್ಷಣೆ, ಅಗ್ನಿಶಮನ ಹಾಗೂ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ‌ ಪ್ರಕಾರದ ಅಣಕು ಪ್ರದರ್ಶನ ಮಾಡಲಾಯಿತು.

ಅತಿ ದೊಡ್ಡ ಕಟ್ಟಡಗಳಲ್ಲಿ ಸಿಲುಕಿದವರನ್ನು ಕೆಳಕ್ಕೆ ಇಳಿಸಿದ ನಂತರ ಅವರನ್ನು ತುರ್ತು ಚಿಕಿತ್ಸೆಗೆ ಕರೆದುಕೊಂಡು ಹೋಗುವುದು ಹೇಗೆ ಎನ್ನುವ ಕುರಿತು ಅಗ್ನಿಶಾಮಕ ದಳದವರು ಮಾರ್ಗದರ್ಶನ ನೀಡಿದರು.

ಯುದ್ಧಗಳ ಸಂದರ್ಭದಲ್ಲಿ ಯಾವ ಊರಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅಂತಹ ಸಂದರ್ಭ ಬರಬಾರದು. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗು ಈ ಮಾಹಿತಿ ನೀಡಬೇಕಾಗುತ್ತದೆ. ಅಗ್ನಿಶಾಮಕ ಮ...