Bengaluru, ಏಪ್ರಿಲ್ 26 -- ಖ್ಯಾತ ಚಿತ್ರಕಾರ ಗುಜ್ಜಾರ್‌ ಅವರ ಚಿತ್ರಗಳು ಓದುಗರೊಂದಿಗೆ ಮಾತನಾಡುತ್ತವೆ. ಇದೊಂದು ದ್ವಿಭಾಷಾ ಪುಸ್ತಕ. ಹಾಸಾಕೃ ಅವರ ಗೆಳೆಯರು ಇಂಗ್ಲೀಷ್‌ನಲ್ಲಿ ಅವರನ್ನು ಕುರಿತು ತಮ್ಮ ಅನುಭವಗಳನ್ನು ದಾಖಲಿಸಿ ವಿಶ್ಲೇಷಿಸಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಬಿಡುಗಡೆಯಾಗುತ್ತಿರುವ ʻಹಾಸಾಕೃʼ ಕೇವಲ ಹಾಸಾಕೃ ಅವರ ಕುರಿತ ಪುಸ್ತಕವಾಗದೆ, ಒಂದು ಕಾಲಕ್ಕೆ ಕನ್ನಡಿ ಹಿಡಿಯುತ್ತದೆ. ರಂಗಭೂಮಿಯ ಇತಿಹಾಸವನ್ನು ದಾಖಲಿಸುತ್ತಲೇ, ಇದುವರೆಗೆ ದಾಖಲಾಗದ ಹಲವು ಸಾಂಸ್ಕೃತಿಕ ಸಂಗತಿಗಳನ್ನು ಓದುಗರ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಇದು ಒಂದು ರೀತಿಯ ಸಂಗ್ರಹಾರ್ಹ ಪುಸ್ತಕ ಎಂದು ಭಾವಿಸಬಹುದು.

ಇಷ್ಟೆಲ್ಲ ಹೇಳಿದ ಮೇಲೂ, ಈ ಪುಸ್ತಕದ ಪ್ರಸ್ತುತೆ ಏನು? ಎಂಬ ಪ್ರಶ್ನೆ ಧುತ್ತೆಂದು ಯಾರ ಮುಂದಾದರೂ ಉದ್ಭವಿಸಿದರೆ ಅದಕ್ಕುತ್ತರ ಇಲ್ಲಿದೆ. ಎಂಭತ್ತು, ತೊಂಭತ್ತರ ದಶಕದಲ್ಲಿ ಮಲ್ಲೇಶ್ವರಂನಲ್ಲಿ ಒಂದು ಆಲದ ಮರವಿತ್ತು. (ಇಲ್ಲಿ ಆಲದ ಮರ ಒಂದು ಪ್ರತಿಮೆ) ಅದರ ಹೆಸರು ʼಮೇಲುಕೋಟೆʼ (ಆ ಸ್ಥಳದ ನಿಜನಾಮ ಕೂಡ). ಆ ಕಾ...