Bangalore, ಮೇ 17 -- ಬೆಂಗಳೂರು: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜನರಿಗೆ ಮುಂದಿನ ವಾರಾಂತ್ಯದ ಮೂರು ದಿನ ವಿಶೇಷ ಮೇಳವೊಂದು ಆಯೋಜನೆಗೊಂಡಿದೆ. ಈಗಾಗಲೇ ಮಾವು ಹಾಗು ಹಲಸಿನ ಅವಧಿ ಶುರುವಾಗಿದ್ದು, ಎರಡೂ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಹಣ್ಣಗಳು ಸಿಗಬಹುದೋ ಎನ್ನುವ ಆತಂಕ ಇರುವವರು, ಮಾವು-ಹಲಸಿನ ಪ್ರಿಯರು ಬೆಂಗಳೂರಿನಲ್ಲಿ ಮೇ ಮೇ 23 ರಿಂದ 25 ನಡೆಯಲಿರುವ ಮಾವು- ಹಲಸಿನ ಮೇಳದಲ್ಲಿ ಭಾಗಿಯಾಗಬಹುದು. ಅದು ಸಾವಯವ ಮಾವಿನ ಹಣ್ಣು ಈ ಬಾರಿ ಮೇಳದಲ್ಲಿ ಜನರ ಬಾಯಿ ರುಚಿ ತಣಿಸಲು ಅಣಿಯಾಗಿದೆ. ಅಲ್ಲದೇ ಬಗೆಬಗೆಯ ಹಲಸು ಕೂಡ ರುಚಿ ನೀಡಲಿವೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಮಾವು, ಹಲಸಿನ ಮಾರಾಟಗಾರರು ಆಗಮಿಸಲಿದ್ದಾರೆ.
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.