Bangalore, ಮೇ 11 -- ಬೆಂಗಳೂರು: ಮುಚ್ಚಿಹೋಗಿರುವ ಚರಂಡಿಗಳು ಮತ್ತು ಮ್ಯಾನ್‌ ಹೋಲ್‌ ಗಳನ್ನುಸ್ವಚ್ಚಗೊಳಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಬ್ಯಾಂಡಿಕೂಟ್' ರೋಬೋಟ್‌ ಎಂಬ ಯಂತ್ರಗಳನ್ನು ಬಳಸಲು ನಿರ್ಧರಿಸಿದೆ. ಈ ಆಧುನಿಕ ತಂತ್ರಜ್ಞಾನದ ರೋಬೋಟ್‌ ಗಳು ಈಗಾಗಲೇ ಚೆನ್ನೈ ತಿರುವನಂತಪುರಂ ಮೊದಲಾದ ನಗರಗಳಲ್ಲಿ ಬಳಸಲಾಗುತ್ತಿದೆ. ಮೂಲಕ ಚರಂಡಿಗಳನ್ನು ಸ್ವಚ್ಚಗೊಳಿಸಲು ಮಾನವರ ಬಳಕೆ ಕಡಿಮೆ ಮಾಡುವುದರ ಜತೆಗೆ ಚರಂಡಿಗಳ ಸ್ವಚ್ಚತೆಯೂ ಸುಧಾರಿಸುತ್ತದೆ.

ಇತ್ತೀಚೆಗೆ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಎಂ.ಮಹೇಶ್ವರ್‌ ರಾವ್‌ ಅವರು ನಾಗರೀಕ ಯೋಜನೆಗಳ ಪರಾಮರ್ಶೆ ಸಭೆಯನ್ನು ನಡೆಸಿದ ನಂತರ ಈ ವಿಷಯ ತಿಳಿಸಿದರು. ಒಳಚರಂಡಿಗಳನ್ನು ಸ್ವಚ್ಚಗೊಳಿಸಲು 'ಬ್ಯಾಂಡಿಕೂಟ್' ರೋಬೋಟ್‌ ಗಳನ್ನು ಬಳಸಲು ನಿರ್ಧರಿಸಲಾಗಿದೆ. ಈ ರೋಬೋಟ್‌ ಗಳನ್ನು ಈಗಾಗಲೇ ಚೆನ್ನೈ ನಗರದಲ್ಲಿ ಬಳಕೆ ಮಾಡಲಾಗುತ್ತಿದ್ದು, ಫಲಿತಾಂಶ ಉತ್ತಮವಾಗಿದೆ ಎಂದರು.

ಈ ಸೆಮಿ ಸ್ವಯಂಚಾಲಿತ ರೋಬೋಟ್‌ ಗಳು ನೇರವಾದ ಚರಂಡಿಗಳನ್ನು ಸ್ವಚ್ಚಗೊಳ...