Bengaluru, ಮಾರ್ಚ್ 17 -- ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗಿ ತಿಂಗಳು ಕಳೆದಿದೆ. ಅದೇ ರೀತಿ ನೀರಿನ ತೆರಿಗೆ ದರವೂ ಯಾವುದೇ ಕ್ಷಣದಲ್ಲದರೂ ಹೆಚ್ಚಳವಾಗಬಹುದು. ಇದರ ನಡುವೆ ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ತೆರಿಗೆ ಹೆಚ್ಚಳದ ದಿನಗಳು ದೂರವಿಲ್ಲ. ಅದು ಈ ವರ್ಷದ ಏಪ್ರಿಲ್‌ 1ರಿಂದಲೇ ಆರಂಭವಾಗಬಹುದು. ಕರ್ನಾಟಕ ಸರ್ಕಾರವು ತ್ಯಾಜ್ಯ ವಿಲೇವಾರಿಗೆ ಬಳಕೆದಾರರ ಶುಲ್ಕವನ್ನು ವಿಧಿಸಲು ಅನುಮೋದನೆ ನೀಡಿರುವುದು ಏಪ್ರಿಲ್ 1 ರಿಂದ ಬೆಂಗಳೂರಿನ ನಿವಾಸಿಗಳ ಆಸ್ತಿ ತೆರಿಗೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.ಕರ್ನಾಟಕ ಸರ್ಕಾರವು ತ್ಯಾಜ್ಯ ಉತ್ಪಾದಕರಿಗೆ ಬಳಕೆದಾರ ಶುಲ್ಕವನ್ನು ಅನುಮೋದಿಸಿರುವುದರಿಂದ ಏಪ್ರಿಲ್ 1 ರಿಂದ ಬೆಂಗಳೂರಿನ ಆಸ್ತಿ ಮಾಲೀಕರು ತಮ್ಮ ತೆರಿಗೆ ಬಿಲ್‌ಗಳಲ್ಲಿ ಹೆಚ್ಚಳವನ್ನು ಎದುರಿಸಬೇಕಾಗುತ್ತದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಕಳೆದ ವರ್ಷ ನವೆಂಬರ್‌ನಲ್ಲಿ ಈ ಶುಲ್ಕವನ್ನು ಪ್ರಸ್ತಾಪಿಸಿತು, ಆದರೂ ಔಪಚಾರಿಕ ಆದೇಶವನ್ನು ಇನ್ನೂ ಹೊರಡಿಸಲಾಗಿಲ್ಲ. ಆದರೆ ...