Bangalore, ಏಪ್ರಿಲ್ 3 -- ಅವರು ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಿಂದರ ಕಾರ್ಯನಿರ್ವಾಹಕ ಅಧಿಕಾರಿ. ಮನೆಯಿಂದ ಕಚೇರಿ ತಲುಪಲು ಸ್ವಂತ ಕಾರು ಇದೆ. ಕಚೇರಿಯಿಂದಲೂ ವಾಹನ ವ್ಯವಸ್ಥೆ ಇದ್ದೇ ಇರುತ್ತದೆ. ಆದರೆ ಅವರು ನಡೆದುಕೊಂಡೇ ಕಚೇರಿ ತಲುಪುವ ಪರಿಪಾಠವನ್ನೂ ಬೆಳೆಸಿಕೊಂಡಿದ್ದಾರೆ. ಆ ದಿನ ಮೊಣಕಾಲಿನ ನೋವಿನಿಂದಾಗಿ ಸಾರ್ವಜನಿಕ ಸಾರಿಗೆ ಬಸ್‌ ಸೇವೆ ಬಳಸಿಕೊಂಡು ಕಚೇರಿಗೆ ಹೋಗಲು ನಿರ್ಧರಿಸಿದರು. ಇದಕ್ಕಾಗಿ ಅವರು ಹತ್ತಿದ್ದು ಬಿಎಂಟಿಸಿ ಬಸ್‌. ಕಚೇರಿಯನ್ನೂ ಅವರು ಸುಸೂತ್ರವಾಗಿ ತಲುಪಿದರು. ಪ್ರಯಾಣವೂ ಅಷ್ಟು ಕಠಿಣ ಎನ್ನಿಸಲಿಲ್ಲ. ಇದಕ್ಕೆ ಅವರು ಮಾಡಿದ ವೆಚ್ಚ ಎಷ್ಟಿರಬಹುದು. ಬರೀ ಆರು ರೂ. ಮಾತ್ರ. ಅಂದರೆ ಮನೆಯಿಂದ ಕಚೇರಿಗೆ ತಲುಪಲು ಅವರು ಅತ್ಯಂತ ಕಡಿಮೆ ಮೊತ್ತ ವ್ಯಯಿಸಿದ್ದರು. ಅದೂ ಡಿಜಿಟಲ್‌ ಪೇಮೆಂಟ್‌ನಂತಹ ಸೇವೆ ಕೂಡ ಅವರಿಗೆ ಸಿಕ್ಕಿತು. ಇದೆಲ್ಲವನ್ನೂ ಕಂಡು ಅವರು ನಿಜಕ್ಕೂ ಒಂದು ಕ್ಷಣ ಅವಾಕ್ಕಾದರು. ದುಬಾರಿ ದುನಿಯಾದಲ್ಲಿ ಈಗಲೂ ಬೆಂಗಳೂರಿನಂತಹ ಊರಲ್ಲಿ ಕಡಿಮೆ ದರದಲ್ಲೂ ಪ್ರಯಾಣಿಸಬಹುದು ಎನ್ನುವುದು ಅವರ ಅಚ್ಚ...