Bangalore, ಮೇ 7 -- ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗುತ್ತಿರುವ ನಡುವೆ ಭಾರತ ಸರ್ಕಾರದ ಗೃಹ ಸಚಿವಾಲಯ (MHA) ಸೂಚನೆ ಮೇರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಅಣಕು ಕವಾಯತು ಪ್ರದರ್ಶನಗಳು ನಡೆದವು.ಅದರಲ್ಲೂ ಏನಾದರೂ ಘಟನೆಗಳಾದರೆ ಇಲ್ಲವೇ ಅನಾಹುತಗಳಾದರೆ ಜನ ಹೇಗೆ ವರ್ತಿಸಬೇಕು. ನೆರವಿಗೆ ಹೇಗೆ ಧಾವಿಸಬೇಕು ಎನ್ನುವುದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಮಾಹಿತಿಗಳನ್ನು ಒದಗಿಸಲಾಯಿತು. ಸೈರನ್‌ಗಳನ್ನು ಮೊಳಗಿಸಿ ಸನ್ನದ್ದತೆಯ ವಿವರಣೆ ನೀಡಲಾಯಿತು. ಮುಖ್ಯವಾಗಿ ರಕ್ಷಣಾ ಪಡೆಗಳು, ಪೊಲೀಸ್ ಪಡೆಗಳು, ಅಗ್ನಿ ಶಾಮಕ ದಳ ಸಹಿತ ತುರ್ತು ಸೇವೆ ಒದಗಿಸುವ ಸಂಸ್ಥೆಗಳ ಕಾರ್ಯವೈಖರಿ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು. ಕೆಲವು ಕಡೆಗಳು ತುರ್ತು ಸಂದರ್ಭದ ಸನ್ನಿವೇಶಗಳನ್ನು ಅಣಕು ಪ್ರದರ್ಶನದ ಮೂಲಕವೇ ತೋರಿಸಲಾಯಿತು.
Published by HT Digital Content Services with permission from HT ...
Click here to read full article from source
To read the full article or to get the complete feed from this publication, please
Contact Us.