ಭಾರತ, ಏಪ್ರಿಲ್ 20 -- 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋ 2ನೇ ಹಂತವನ್ನು 2020ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಅವರು ಭರವಸೆ ನೀಡಿ 7 ವರ್ಷಗಳು ಕಳೆದಿವೆ. 2ನೇ ಹಂತದ ಅರ್ಧಭಾಗದಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಈ ಹಂತದ 40.41 ಕಿಮೀ ಮಾರ್ಗ ಸಿದ್ಧವಾಗಲು 2026ರ ಡಿಸೆಂಬರ್‌ ವರಗೆ ಕಾಯಲೇಬೇಕಾಗಿದೆ.

2011ರ ನವೆಂಬರ್ ನಲ್ಲಿ ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ಕಾರ್ಯಾರಂಭಗೊಂಡಿತು. ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ 6.7 ಕಿಮೀ ವರೆಗೆ ಮಾತ್ರ. ಅಲ್ಲಿಂದೀಚೆಗೆ ನಮ್ಮ ಮೆಟ್ರೋಗೆ ಸೇರ್ಪಡೆಯಾಗಿದ್ದು, 70.25 ಕಿಮೀ ಮಾತ್ರ. ಅಂದರೆ ವರ್ಷಕ್ಕೆ 5.2 ಕಿಮೀ ಸೇರ್ಪಡೆಯಾಗಿದೆ. ಎರಡನೇ ಹಂತಕ್ಕೆ 2014 ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದುಕೊಳ್ಳಲಾಯಿತಾದರೂ 2016 ರ ಫೆಬ್ರವರಿ ವರೆಗೆ ನಿರ್ಮಾಣ ಕಾರ್ಯ ಆರಂಭವಾಗಲೇ ಇಲ್ಲ. ಎರಡು ವರ್ಷಗಳ ನಂತರ ಗುಲಾಬಿ ಮತ್ತು ಹಳದಿ ಮಾರ್ಗಗಳಿಗೆ ಅನುಮತಿ ಸಿಕ್ಕಿದೆ. ಸಿದ್ದರಾಮಯ್ಯ ಅವರ ಗ...