Bangalore, ಏಪ್ರಿಲ್ 4 -- ಬೆಂಗಳೂರು ಪ್ರಮುಖ ಐಟಿ ನಗರಿ ಮಾತ್ರವಲ್ಲ. ಹೂಡಿಕೆ ನಗರವಾಗಿಯೂ ಮಾರ್ಪಟ್ಟದೆ. ಅದರಲ್ಲೂ ಕಟ್ಟಡ ನಿರ್ಮಾಣ ವಲಯದಲ್ಲಂತೂ ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಲೇ ಇದೆ. ಬೆಂಗಳೂರಿನ ಯಾವ ಭಾಗದಲ್ಲಿ ಬೆಳವಣಿಗೆ ಬಲವಾಗಿ ರೂಪುಗೊಂಡಿದೆ ಎನ್ನುವ ಕುರಿತು ಚರ್ಚೆಗಳು ನಡೆದಿದ್ದರೂ ದೇವನಹಳ್ಳಿ ಭಾಗ ಮಾತ್ರ ದೊಡ್ಡ ಪ್ರಮಾಣದಲ್ಲಿಯೇ ಬೆಳೆಯುತ್ತದೆ. ಒಂದು ದಶಕದ ಅವಧಿಯಲ್ಲಂತೂ ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿನ ಮೂಲಸೌಕರ್ಯಗಳ ವೃದ್ದಿ. ಹೂಡಿಕೆಯ ಪ್ರಮಾಣ, ಹೊಸ ಹೊಸ ಯೋಜನೆಗಳ ಜಾರಿಯಿಂದಾಗಿ ದೇವನಹಳ್ಳಿ ತ್ವರಿತವಾಗಿ ಬೆಳೆಯುತ್ತಿರುವ ಪ್ರದೇಶದ ರೂಪ ಪಡೆದುಕೊಂಡಿದೆ.ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR), ಮತ್ತು ಪ್ರಸ್ತಾವಿತ ಐಟಿ ಮತ್ತು ವ್ಯಾಪಾರ ಪಾರ್ಕ್‌ಗಳಂತಹ ಯೋಜನೆಗಳೊಂದಿಗೆ ಬೆಂಗಳೂರಿನ ದೇವನಹಳ್ಳಿ ಕ್ರಮೇಣ ಪ್ರಮುಖ ಹೂಡಿಕೆ ಕೇಂದ್ರವಾಗಿ ವಿಕಸನಗೊಳ್ಳುತ್ತಿದೆ.

ಆದಾಗ್ಯೂ, ಇದು ದೆಹಲಿ ನಗರ ಸಮೀಪದಲ್ಲಿರುವ ಹರಿಯಾಣದ ಗುರುಗ್ರಾಮ್‌ನಂತಹ...