Bengaluru, ಮೇ 26 -- ಮೇ 31ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಭಾರತ ಕಂಡ ಲೆಜೆಂಡರಿ ಕಲಾವಿದ, ಬಾಲಿವುಡ್ ಶೆಹೆಂಶಾ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಅವಿಸ್ಮರಣೀಯ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಸುಮಾರು 4 ಘಂಟೆಗಳ ಕಾಲ ನಡೆಯಲಿರುವ ಈ ರಸಮಂಜರಿ ಕಾರ್ಯಕ್ರಮದಲ್ಲಿ ಭಾರತದ ಅತ್ಯದ್ಭುತ ಗಾಯಕರಿಂದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಭಾಧುರಿ ಹಾಗೂ ಐಶ್ವರ್ಯ ರೈ ಅಭಿನಯದ ಸೂಪರ್ ಹಿಟ್ ಹಾಡುಗಳ ಗೀತ ಗಾಯನದ ಬ್ಲಾಕ್ಬಸ್ಟರ್ ಕಾರ್ಯಕ್ರಮದ ನಡೆಯಲಿದೆ.
AV ಕಾರ್ಪ್ ಸಂಸ್ಥೆ (ಅಶೋಕ್ ಬೊಹ್ರ- ಡಾ ವಿದ್ಯಾ ಸಾಗರ್) ಆಯೋಜಿಸಿರುವ ಈ ಕಾರ್ಯಕ್ರಮವು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಪರಿಕಲ್ಪನೆ ಆಧಾರಿತ ಸಂಗೀತ ಕಚೇರಿಗಳನ್ನು ಮನೆ ತುಂಬಿದ ಪ್ರೇಕ್ಷಕರಿಗೆ ಕ್ಯುರೇಟ್ ಮಾಡಿ ನಡೆಸುವಲ್ಲಿ ಎವಿ ಕಾರ್ಪ್ ಸಂಸ್ಥೆ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.