Bangalore, ಏಪ್ರಿಲ್ 18 -- ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಸವ ಜಯಂತಿಯ ಅಂಗವಾಗಿ ಬಾಗಲಕೋಟೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ಲಾಂಛನ ಬಿಡುಗಡೆ ಹಾಗೂ ರಥಯಾತ್ರೆಗೆ ಚಾಲನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಗಣ್ಯರು ಬೆಂಗಳೂರಿನ ವಿಧಾನಸೌಧದ ಎದುರು 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ರಥಯಾತ್ರೆಗೆ ಚಾಲನೆ ನೀಡಿದರು.

ಈಗಾಗಲೇ ಮಂಡ್ಯದ ಮೂಲಕ ಮೈಸೂರಿಗೆ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ರಥಯಾತ್ರೆ ತಲುಪಿದ್ದು, ಮುಂದಿನ ಎರಡು ವಾರ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದೆ.

ಅನುಭವ ಮಂಟಪ, ಬಸವಣ್ಣನವರ ವಿಚಾರ ಧಾರೆಯನ್ನು ಜಾಗೃತಿ ಮೂಡಿಸುವ ಭಾಗವಾಗಿ ರಥಯಾತ...