ಭಾರತ, ಏಪ್ರಿಲ್ 10 -- Bengaluru to Rameshwaram: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ತಮಿಳುನಾಡಿನ ರಾಮೇಶ್ವರಂನಲ್ಲಿ ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಅನ್ನು ಲೋಕಾರ್ಪಣೆ ಮಾಡಿದ್ದರು. ಆಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಪಂಬನ್ ಸೇತುವೆ ಇದೀಗ ಎಲ್ಲರ ಆಕರ್ಷಣೆಯಾಗುತ್ತಿದೆ. 534 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆ ಭಾರತೀಯ ರೈಲ್ವೆ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲು ಆಗಿದೆ. ಒಂದು ವೇಳೆ ನೀವೇನಾದರೂ ರಾಮೇಶ್ವಂಗೆ ಪ್ರವಾಸ ಕೈಗೊಳ್ಳುವ ಪ್ಲಾನ್ ಇದ್ದರೆ ಪಂಬನ್ ಸೇತುವೆ ವೀಕ್ಷಣೆಯ ಜೊತೆಗೆ ಈ ಭಾಗದಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳನ್ನು ನೋಡಬಹುದು, ಬೆಂಗಳೂರಿನಿಂದ ರಾಮೇಶ್ವರಂಗೆ ಹೋಗುವುದು ಹೇಗೆ ಎಂಬುದರ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ಬೆಂಗಳೂರಿನಿಂದ ರಾಮೇಶ್ವರಂಗೆ ಒಂದೇ ಒಂದು ನೇರ ರೈಲು ಸೇವೆ ಇದೆ. ಅದು ಕೂಡ ವಾರದಲ್ಲಿ ಒಮ್ಮೆ ಬೆಂಗಳೂರಿನಿಂದ ರಾಮೇಶ್ವರಂಗೆ ಸಂಚಾರ ನಡೆಸುತ್ತಿದೆ. ಈ ರೈಲಿನ ಹೆಸರು ಯುಬಿಎಲ್ ಆರ್ ಎಂಎಂ ಎಕ್ಸ್ ಪ್ರೆಸ್ ...