ಭಾರತ, ಏಪ್ರಿಲ್ 11 -- ಕನ್ನಡ ಒಂದು ಸುಂದರ ಭಾಷೆ. ಭಾರತದ ಭಾಷೆಗಳ ರಾಣಿ ಎಂದು ಕರೆಯಲ್ಪಡುವ ಭಾಷೆ ಕನ್ನಡಿಗರಿಗೆ ಮಾತ್ರವಲ್ಲದೆ ಹೊರಗಿನವರಿಗೂ ಇಷ್ಟ. ಬೆಂಗಳೂರಿನಲ್ಲಿ ಭಾಷೆಯ ಬಗ್ಗೆ ಆಗಾಗ ಚರ್ಚೆಗಳು ನಡೆಯುವುದು ಬೆಳಕಿಗೆ ಬರುತ್ತದೆ. ಈ ನಡುವೆ ಕನ್ನಡ ಕಲಿಯಲು ಆಸಕ್ತಿ ತೋರುವವರೂ ಇದ್ದಾರೆ. ಇದೀಗ, ಐಪಿಎಲ್‌ನ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಪಂದ್ಯಗಳ ಜೊತೆಗೆ ಕನ್ನಡ ಭಾಷೆ ಕಲಿಕೆಗೆ ಜನರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಭಿನ್ನ ಅಭಿಯಾನ ಕೈಗೊಂಡಿದೆ. ಕನ್ನಡ ಅಕ್ಷರ ಮತ್ತು ಪದಗಳಿರುವ ಜಿಲೇಬಿಗಳನ್ನು ಬಳಸಿಕೊಂಡು ಅಭಿಮಾನಿ ಬಳಗದಲ್ಲಿ ಕನ್ನಡ ಭಾಷೆ ಕಲಿಕೆಗೆ ಉತ್ತೇಜಿಸಲು ಮುಂದಾಗಿದೆ. ಯಾಕೆಂದರೆ ಕನ್ನಡ ಭಾಷೆ ಜಿಲೇಬಿಯಷ್ಟೇ ಸಿಹಿ ಅಲ್ವಾ.

ಆರ್‌ಸಿಬಿ ತಂಡವು ಐಪಿಎಲ್‌ ಜೊತೆಜೊತೆಗೆ ಹಲವು ಅಭಿಯಾನಗಳನ್ನು ನಡೆಸಿ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ಕನ್ನಡ ಭಾಷೆಯ ಕುರಿತಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಅಭಿಯಾನವೊಂದು ನಡೆಯುತ್ತಿದೆ. ಈ ಅಭಿಯಾನವು ಅಭಿಮಾನಿಗಳಿಗೆ ಸ್ಥಳೀಯ...