Bengaluru, ಮೇ 9 -- ಬೆಂಗಳೂರು: ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ವಾಹನಗಳ ಕಳವೂ ಹೆಚ್ಚುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ವರದಿಯಾದ ವಾಹನಗಳ ಕಳವು ಸಂಖ್ಯೆಯಲ್ಲಿ ಶೇ. 44ರಷ್ಟು ವಾಹನಗಳ ಕಳವು ಬೆಂಗಳೂರಿನಲ್ಲೇ ವರದಿಯಾಗಿವೆ. ಪ್ರತಿ ತಿಂಗಳು 350 ದ್ವಿಚಕ್ರ ವಾಹನಗಳು ಕಳವಾಗುತ್ತಿವೆ. ಕಳವಾಗುತ್ತಿರುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ಇಡೀ ಬೆಂಗಳೂರಿನಲ್ಲಿ ಸಿಸಿಟಿವಿಗಳಿಗೇನೂ ಕೊರತೆ ಇಲ್ಲದಿದ್ದರೂ ಕಳವಾದ ವಾಹನಗಳ ಪತ್ತೆ ಮಾತ್ರ ಸರಾಸರಿಗಿಂತ ಕಡಿಮೆಯಿದೆ. ಕಳ್ಳರ ಪಾಲಿಗೆ ಬ್ಲಾಕ್‌ ಸ್ಪಾಟ್‌ಗಳು ಹಾಟ್‌ ಸ್ಪಾಟ್‌ಗಳಾಗುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ವರ್ಷದ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯದಲ್ಲಿ 2,473 ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರು ಒಂದರಲ್ಲೇ 1,106 ಪ್ರಕರಣಗಳು ಸೇರಿವೆ. 2024ರಲ್ಲಿ ರಾಜ್ಯದಲ್ಲಿ 11,610 ವಾಹನ ಕಳವು ಪ್ರಕರಣಗಳು ದಾಖಲಾಗ...