ಭಾರತ, ಏಪ್ರಿಲ್ 8 -- ಬೆಂಗಳೂರು: ಬೆಂಗಳೂರಿನ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ಏಪ್ರಿಲ್ 3ರಂದು ಜರುಗಿದ ಘಟನೆಯ ಸಿಸಿಟಿವಿ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಂದು ನಡೆದ ಘಟನೆಯ ಬಗ್ಗೆ ಇದುವರೆಗೆ ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಕಿರಿದಾದ ಗಲ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಅವರಿಗೆ ತಿಳಿಯದಂತೆ ಹಿಂದಿನಿಂದ ಬಂದು ಅವರನ್ನು ಮೂಲೆಗೆ ತಳ್ಳಿ ಅವರ ಮೇಲೆ ಬಿದ್ದಿದ್ದಾನೆ. ಇಬ್ಬರು ಹುಡುಗಿಯರು ಆ ಕ್ಷಣಕ್ಕೆ ಏನಾಗುತ್ತಿದೆ ಎಂದೇ ತಿಳಿಯದೆ ಗಾಬರಿಯಾಗಿದ್ದಾರೆ.

ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ವೀಡಿಯೊದಲ್ಲಿರುವ ಟೈಮ್ ಸ್ಟಾಂಪ್ ಪ್ರಕಾರ...