ಭಾರತ, ಏಪ್ರಿಲ್ 30 -- ಬೆಂಗಳೂರು: ಪುರುಷರಂತೆ ವೇಷ ಧರಿಸಿ ಆಟೋದಲ್ಲಿ ಆಗಮಿಸಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಲೋಫ‌ರ್ (20) ಹಾಗೂ ಶಬೀನ್ ತಾಜ್ (32) ಬಂಧಿತ ಆರೋಪಿಗಳು. ಇವರಿಂದ 11 ಲಕ್ಷ ರೂ ಮೌಲ್ಯದ 130 ಗ್ರಾಂ. ಚಿನ್ನಾಭರಣ ಹಾಗೂ ಆಟೊವೊಂದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲೋಫರ್‌ ಓರ್ವ ಅನಾಥೆ. ಈಕೆಯನ್ನು ಶಬೀನ್ ತಾಜ್ ಸಾಕಿ ಸಲುಹಿದ್ದಳು. ಜತೆಗೆ ಇನ್ನೂ ಇಬ್ಬರು ಅನಾಥ ಮಕ್ಕಳನ್ನು ಈಕೆ ಬೆಳಸಿದ್ದಾಳೆ. ಇವರೆಲ್ಲರನ್ನೂ ತನ್ನ ಅಪರಾಧ ಕೃತ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಳು. ಈ ತಂಡ ಜನಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಆ ರಸ್ತೆಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಶಬೀನ್ ತಾಜ್‌ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದು ಪತ್ತೆಯಾಗಿತ್ತು. ಈ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ.

ನಿಲೋಫರ್ ಪುರುಷರ ವೇಷ ಧರಿಸಿ ಆಟೋ ಚಲಾ...