Bangalore, ಏಪ್ರಿಲ್ 20 -- ಬೆಂಗಳೂರು: ಸೈಬರ್‌ ವಂಚನೆಗೆ ಒಳಗಾಗಬೇಡಿ ಎಂದು ದಿನನಿತ್ಯ ಪೊಲೀಸ್‌, ಆರ್‌ಬಿಐ, ಮಾಧ್ಯಮಗಳ ಆದಿಯಾಗಿ ಎಲ್ಲರೂ ಎಚ್ಚರಿಕೆ ನೀಡುತ್ತಲೇ ಬಂದಿದ್ದರೂ ಪದೇ ಪದೇ ವಂಚನೆಗೊಳಗಾಗುವ ಪ್ರಕರಣಗಳು ಹಚ್ಚುತ್ತಲೇ ಇವೆ. ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸುಶಿಕ್ಷಿತರೇ ಬಲಿಯಾಗುತ್ತಿರುವುದು ಮತ್ತೊಂದು ವಿಶೇಷ. ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ವಂಚಕರು ಬೆಂಗಳೂರಿನ ಖಾಸಗಿ ಕಂಪನಿಯ ಸಾಫ್ಟ್‌ವೇರ್ ಎಂಜಿನಿಯರ್‌ ವೊಬ್ಬರಿಗೆ ರೂ. 84 ಲಕ್ಷ ಮತ್ತು ಮತ್ತೊಬ್ಬರಿಗೆ 40 ಲಕ್ಷ ರೂ. ವಂಚಿಸಿರುವ ಎರಡು ಪ್ರಕರಣಗಳು ವರದಿಯಾಗಿವೆ.ಸೈಬರ್‌ ವಂಚಕರು ಡಿಜಿಟಲ್‌ ಅರೆಸ್ಟ್ ಹೆಸರಿನಲ್ಲಿ ಖಾಸಗಿ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ ವೊಬ್ಬರಿಗೆ ರೂ. 84 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಅವರು ದೂರು ದಾಖಲಿಸಿದ್ದು, ವೈಟ್‌ ಫೀಲ್ಡ್‌ ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಈ ಮಹಿಳಾ ಇಂಜಿನಿಯರ್‌ ಗೆ...