Bangalore, ಜೂನ್ 4 -- ಬೆಂಗಳೂರು: ವೈಮಾಂತರಿಕ್ಷ ಕ್ಷೇತ್ರದಲ್ಲಿ ಮುಂಚೂಣಿ ಕಂಪನಿಯಾಗಿರುವ ಥೇಲ್ಸ್ ಇಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಇನ್-ಫ್ಲೈಟ್ ಎಂಟರ್ಟೇನ್ಮೆಂಟ್ ಮತ್ತು ಸರ್ವೀಸಸ್ ಲ್ಯಾಬ್ ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಸಾರ್ವಜನಿಕ ಸ್ವಾಮ್ಯದ ಬಿಇಎಲ್ ಜತೆ ದೀರ್ಘಕಾಲದಿಂದಲೂ ಸಹಭಾಗಿತ್ವ ಹೊಂದಿರುವ ಥೇಲ್ಸ್ ಕಂಪನಿಯು ಈಗ ರಾಜ್ಯದಲ್ಲಿ ತನ್ನ ಎರಡನೆಯ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ ಕರ್ನಾಟಕದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮ ವಲಯಗಳಿಗೆ ಮತ್ತಷ್ಟು ಬಲ ಬರಲಿದೆ ಎಂದಿದ್ದಾರೆ.

ಥೇಲ್ಸ್ ಕಂಪನಿಯ ಈ ಹೆಜ್ಜೆಯು ಸ್ಥಳೀಯವಾಗಿ ಲಭ್ಯವಿರುವ ಪ್ರತಿಭಾವಂತ ಎಂಜಿನಿಯರುಗಳಿಗೆ ಮಹತ್ವದ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಲಿದೆ. ಈ ಕೇಂದ್ರದ ಮೂಲಕ ಏವಿಯಾನಿಕ್ಸ್, ವಿಮಾನ ಸಂಚಾರ ನಿರ್ವಹಣೆ, ಸಂಪರ್ಕ ಸುಧಾರಣೆ ಮತ್ತು ವೈಮಾನಿಕ ನಿರ್ವಹಣೆ ಮುಂತಾ...