Bangalore, ಮೇ 4 -- ಬೆಂಗಳೂರು: ಕರ್ನಾಟಕದ ರಾಜಧಾನಿ, ಭಾರತದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಅತಿ ದೊಡ್ಡಸಮಸ್ಯೆ ಎಂದರೆ ಪಾರ್ಕಿಂಗ್ ಅರ್ಥಾತ್‌ ವಾಹನ ನಿಲುಗಡೆ. ನಗರದ ಹೃದಯ ಭಾಗದ ವ್ಯಾಪ್ತಿಯಲ್ಲಿ 10-15 ಕಿಮೀ ವ್ಯಾಪ್ತಿಯಲ್ಲಿ ಕಾರು ಬಿಡಿ, ದ್ವಿಚಕ್ರ ವಾಹನಕ್ಕೂ ಪಾರ್ಕಿಂಗ್‌ ಸಿಗುವುದಿಲ್ಲ. ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್‌ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಒಂದರ ಮೇಲೊಂದು ವಾಹನಗಳನ್ನು ಪಾರ್ಕಿಂಗ್‌ ಮಾಡಿರುವುದನ್ನು ಕಾಣಬಹುದು. ಕಚೇರಿಗೆ ಹೋಗುವವರು, ವ್ಯಾಪಾರಿಗಳು, ಅಂಗಡಿ ಮುಂಗಟ್ಟು ಮಾಲೀಕರು ಮತ್ತು ನಿವಾಸಿಗಳು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಬೆಂಗಳೂರು ಅಷ್ಟ ದಿಕ್ಕುಗಳಲ್ಲೂ ಯೋಜನಾರಹಿತವಾಗಿ ಬೆಳೆಯುತ್ತಿದೆ. ಕಂಡ ಕಂಡಲ್ಲಿ ಲೇಔಟ್‌ ಗಳು, ಬಡಾವಣೆಗಳು, ಅಪಾರ್ಟ್‌ ಮೆಂಟ್‌ ಗಳು ತಲೆ ಎತ್ತುತ್ತಲೇ ಇವೆ. ಈ ಕಾರಣಕ್ಕೆ ನಗರದ ಜನಸಂಖ್ಯೆಯೂ ವಿಪರೀತ ಎನ್ನುವಷ್ಟು ಹೆಚ್ಚಳವಾಗಿದೆ.

ಜತೆ ಜತೆಯಾಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ನೋಂದಣಿಯಾದ 1.23 ಕೋಟಿ ...