ಭಾರತ, ಜನವರಿ 29 -- ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದ ಶ್ರೀರಾಂಪುದ ಜಕ್ಕರಾಯನಕೆರೆ ಮೈದಾನದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 150ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಡೀ ಬೆಂಗಳೂರಿನಲ್ಲಿ ಕ್ರಿಮಿನಲ್‌ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಜಕ್ಕರಾಯನಕೆರೆ ಮೈದಾನದಲ್ಲಿ ನಿಲ್ಲಿಸಲಾಗುತ್ತದೆ. ಬುಧವಾರ (ಜ.29) ಬೆಳಗ್ಗೆ 10.55ಕ್ಕೆ ಸಂಭವಿಸಿದ ಬೆಂಕಿ ದುರಂತದಲ್ಲಿ 130 ದ್ವಿಚಕ್ರ ವಾಹನಗಳು, 10 ಕಾರು ಮತ್ತು 10 ಆಟೋರಿಕ್ಷಾಗಳು ಸುಟ್ಟು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೈದಾನದ ಪಕ್ಕದಲ್ಲಿಯೇ ಜೆಡಿಎಸ್ ಕಚೇರಿ ಇದೆ. ಮೈದಾನವು ಮೆಜೆಸ್ಟಿಕ್‌ ಹಾಗೂ ಮಂತ್ರಿ ಮಾಲ್‌ಗೂ ಹತ್ತಿರವಿದೆ. ಬೆಂಕಿ ವೇಗವಾಗಿ ಹರಡಿದೆ. ಯಶವಂತಪುರ, ರಾಜಾಜಿನಗರ ಮತ್ತು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗಳ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಬೆಂಕಿಯನ್ನು ನಂದಿಸಲು ಶ್ರಮಿಸಿವೆ. ಶ್ರೀರಾಂಪುರ ಪೊಲೀಸ್‌ ಠಾಣೆ ಪೊಲೀಸ...