Bangalore, ಏಪ್ರಿಲ್ 25 -- ಬೆಂಗಳೂರು:ಬೆಂಗಳೂರು ನಗರ ಸುರಕ್ಷತೆ, ನಾಗರೀಕರ ಸಮಸ್ಯೆಗಳು ಸೇರಿದಂತೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ನಡೆಸಿಕೊಂಡು ಬರುತ್ತಿರುವ ನಮಸ್ಕಾರ ಬೆಂಗಳೂರು ಎನ್ನುವ ಕಾರ್ಯಕ್ರಮ 2025 ರ ಏಪ್ರಿಲ್‌ 26ರ ಶನಿವಾರ ನಡೆಯಲಿದೆ.ನಗರ ಪೊಲೀಸ್‌ ಆಯುಕ್ತರಾದ ಬಿ.ದಯಾನಂದ ಅವರ ನೇತೃತ್ವದಲ್ಲಿ ಮಾಸಿಕ ಜನ ಸಂಪರ್ಕ ಸಭೆ ನಡೆಯುತ್ತಿದ್ದು. ಪೊಲೀಸ್‌ ಆಯುಕ್ತರ ಸಹಿತ ಎಲ್ಲಾ ಹಿರಿಯ ಅಧಿಕಾರಿಗಳು ಶನಿವಾರ ಲಭ್ಯ ಇರಲಿದ್ದಾರೆ. ವಿವಿಧ ಹಂತದ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರು ಸಭೆಗಳಲ್ಲಿ ಹಾಜರಿದ್ದು ಜನರ ಸಮಸ್ಯೆಗೆ ಪರಿಹಾರ ಕೊಡಲಿದ್ದಾರೆ. ಸಂಬಂಧಪಟ್ಟ ನಾಗರೀಕರು ನಿಗದಿತ ಉಪವಿಭಾಗಗಳಿಗೆ ಆಗಮಿಸಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ಒಳಗೆ ತಮ್ಮ ದೂರು ನೀಡಬಹುದು ಎಂದು ತಿಳಿಸಲಾಗಿದೆ.

ಬೆಂಗಳೂರು ನಗರ ಪೊಲೀಸರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮಲ್ಲಿರುವ ಸಲಹೆಗಳು ಅಥವಾ ದೂರುಗಳನ್ನು ಏಪ್ರಿಲ್ 26ರ ಶನಿವಾರದಂದು ಬೆಂಗಳೂರಿನ ಬನ್ನೇರುಘಟ್ಟ...