ಭಾರತ, ಫೆಬ್ರವರಿ 9 -- ಬೆಂಗಳೂರು: ಬಹುನಿರೀಕ್ಷಿತ ಏರೋ ಇಂಡಿಯಾ ಶೋ 2025ಕ್ಕೆ (Aero India Show 2025) ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ನಾಳೆಯಿಂದ, ಅಂದರೆ ಫೆಬ್ರುವರಿ 10ರಿಂದ 14ರವರೆಗೆ ನಡೆಯಲಿರುವ ಏರ್‌ ಶೋಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಫೈಟರ್ ಜೆಟ್‌ಗಳು ಯಲಹಂಕ ವಾಯುನೆಲೆಯಲ್ಲಿ ಪೂರ್ವಾಭ್ಯಾಸದ ಹಾರಾಟವನ್ನು ಆರಂಭಿಸಿವೆ. ಬಾನಂಗಳದಲ್ಲಿ ರೋಮಾಂಚಕ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಲು ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಅವರು ಭಾನುವಾರ (ಫೆ. 9) ಎಲ್‌ಸಿಎ ತೇಜಸ್ ಯುದ್ಧ ವಿಮಾನದ ತರಬೇತಿ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಹಾರಾಟ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಏರೋ ಇಂಡಿಯಾ ಶೋ ನೋಡಲು ಬೆಂಗಳೂರಿಗೆ ಬರುವ ಯೋಜನೆ ಹಾಕಿಕೊಂಡಿರುವವರು ಈ ಐದು ಪ್ರಮುಖ ವಿಷಯಗಳನ್ನು ಮೊದಲೇ ತಿಳಿದುಕೊ...