ಭಾರತ, ಏಪ್ರಿಲ್ 1 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕ್ರಿಕೆಟ್ ಅಭಿಮಾನಿಗಳಿಗಾಗಿ ವಿಶೇಷ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ತವರಿನಲ್ಲಿ ಜರುಗುವ ಪಂದ್ಯಗಳಿಗಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಮತ್ತು ಪಂದ್ಯದ ಬಳಿಕ ಹೊರಡುವ ಕ್ರಿಕೆಟ್ ಫ್ಯಾನ್ಸ್​ಗೆ ಬಿಎಂಟಿಸಿ ವಿಶೇಷ ಸೇವೆ ಒದಗಿಸಲಿದೆ. ಏಪ್ರಿಲ್ 2, 10, 18, 24 ಮತ್ತು ಮೇ 3, 13, 17 ರಂದು ಲಭ್ಯವಿರುತ್ತವೆ.

ಬೇಡಿಕೆಯ ಹೆಚ್ಚಳ ಪೂರೈಸಲು ಬಿಎಂಟಿಸಿ ನಗರದ ಪ್ರಮುಖ ಪ್ರದೇಶಗಳನ್ನು ಕ್ರೀಡಾಂಗಣದೊಂದಿಗೆ ಸಂಪರ್ಕಿಸುವ ಬಹು ಮಾರ್ಗಗಳಲ್ಲಿ ಬಸ್‌ಗಳನ್ನು ನಿಯೋಜಿಸಲಿದೆ. ಗೊತ್ತುಪಡಿಸಿದ ಮಾರ್ಗಗಳಲ್ಲಿ ಇವು ಸೇರಿವೆ.

ಎಸ್‌ಬಿಎಸ್-1ಕೆ: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ (ಎಚ್‌ಎಎಲ್ ರಸ್ತೆ ಮೂಲಕ)

ಜಿ-2: ಸರ್ಜಾಪುರ

ಜಿ-3: ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ...