ಭಾರತ, ಜುಲೈ 29 -- ಬೆಂಗಳೂರು: ದುಬೈ ಮೂಲದ ಟ್ರಾವೆಲ್ ಸಂಸ್ಥೆಯ ಮ್ಯಾನೇಜರ್ ಲಾರೆನ್ಸ್ ಮೆಲ್ವಿನ್ (37) ಅವರನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ರಕ್ಷಿಸಿದ್ದಾರೆ. ಮ್ಯಾನೇಜರ್‌ ಅನ್ನು ಅಪಹರಿಸಿ 2.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೆಲ್ವಿನ್‌ ಸ್ನೇಹಿತೆ ಮಹಿಮಾ ವತ್ ಮತ್ತು ಇತರ ಮೂವರು ಪರಾರಿಯಾಗಿದ್ದಾರೆ.

ವರದಿಯ ಪ್ರಕಾರ, ಲಾರೆನ್ಸ್ ಮೆಲ್ವಿನ್ ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದರು. ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು. ಜುಲೈ 16ರಂದು ಅವರ ತಾಯಿ ಲೀನಾ ಆಂಟನಿ ಮಗ ನಾಪತ್ತೆಯಾಗಿರುವ ಸಂಬಂಧ ದೂರು ದಾಖಲಿಸಿದ್ದರು. ಜುಲೈ 14ರಿಂದ ಮಗನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ದೂರು ನೀಡಿದ್ದರು.

ಜುಲೈ 14ರಂದು ಮೆಲ್ವಿನ್ ಅವರನ್ನು ಮಹಿಮಾ ತಾನು ಬುಕ್ ಮಾಡಿದ ಕಾರಿನಲ್ಲಿ ಬರಲು ಆಹ್ವಾನಿಸಿದ್ದಳು ಎಂದು ವರದಿ ತಿಳಿಸಿದೆ. ಕೋರಮಂಗಲದ ಬಳಿ, ಚಾಲಕ ಮಾರ್ಗ ಬದಲಿಸಿದ್ದಾನೆ. ಆ ನಂತರ ಇಬ್ಬರು ಪುರುಷರು ಕಾರಿ...