Bengaluru, ಫೆಬ್ರವರಿ 7 -- ಬೆಂಗಳೂರು: ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿನ ಬೀದಿಗಳಲ್ಲಿ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ "ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ, ಉದ್ಯೋಗಗಳು ಅನ್ಯಭಾಷಿಕರ ಪಾಲಾಗುತ್ತಿದೆ" "ಕನ್ನಡಿಗರಿಗೆ ಉದ್ಯೋಗ ಪ್ರಾತಿನಿಧ್ಯ ಹೆಚ್ಚಬೇಕು" "ಬೆಂಗಳೂರಿನಲ್ಲಿ ಕನ್ನಡಿಗರಿಗೆ ಕೆಲಸವಿಲ್ಲ" ಎಂಬ ಕೂಗು, ಹೋರಾಟಗಳ ನಡುವೆ "ತೆಲುಗು ಭಾಷೆ ಬಲ್ಲವರಿಗೆ ಮಾತ್ರ ಉದ್ಯೋಗ" ಎಂಬ ಪೋಸ್ಟರ್‌ಗಳನ್ನು ಬೀದಿಬೀದಿಗಳಲ್ಲಿ ರಾಜಾರೋಷವಾಗಿ ಅಂಟಿಸಲಾಗಿದೆ. ಚಿಕ್ಕಲಸಂದ್ರದ ವಿವಿಧೆಡೆ ಅಂಟಿಸಲಾಗಿರುವ ಇಂತಹ ಬೋರ್ಡ್‌ಗಳ ಫೋಟೋಗಳನ್ನು ಓದುಗರಾದ ವಿಶ್ವನಾಥ್ ಅವರು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಕ್ಕೆ ಕಳಿಸಿದ್ದಾರೆ.

ಮನೆಯಿಂದ ಕೆಲಸ ಮಾಡಿ, ತೆಲುಗು ಭಾಷಿಕರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೆ 20ರಿಂದ 40 ಸಾವಿರ ರೂಪಾಯಿವರೆಗೆ ವೇತನ ಇರುತ್ತದೆ ಎಂಬರ್ಥದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಯಾವುದಾದರೂ ತೆಲುಗ...